ಧಾರವಾಡ ರಾಯಾಪುರದ ಕೆಐಎಡಿಬಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತಿದ್ದ ಭೂಸಂತ್ರಸ್ತ ರೈತರ ಸಂಭ್ರಮ. 
ಧಾರವಾಡ

ಕೆಐಎಡಿಬಿ ಕಚೇರಿ ಸ್ಥಳಾಂತರ ಆದೇಶ ರದ್ದು

ಧಾರವಾಡ: ಇಲ್ಲಿನ ರಾಯಾಪುರದ ಕೆಐಎಡಿಬಿ ವಲಯ ಕಚೇರಿಯನ್ನು ಬೆಳಗಾವಿಗೆ ಸ್ಥಳಾಂತರಿಸುವ ಆದೇಶವನ್ನು ಕೆಐಎಡಿಬಿ ಸಿಇಒ ಸೋಮವಾರ ರದ್ದುಪಡಿಸಿ ಪರಿಷತ ಆದೇಶ ಹೊರಡಿಸಿದ್ದಾರೆ.
ಧಾರವಾಡ ಕೆಐಎಡಿಬಿ ಕಚೇರಿಯನ್ನು ಸಿಬ್ಬಂದಿ ಬೆಳಗಾವಿಗೆ ಸ್ಥಳಾಂತರಿಸಲು ಇತ್ತೀಚೆಗೆ ಆದೇಶಿಸಲಾಗಿತ್ತು. ವಿಶೇಷ ಭೂಸ್ವಾಧಿನಾಧಿಕಾರಿಗಳು, ಕೆಐಎಡಿಬಿ ವಲಯ ಕಚೇರಿ ಬೆಳಗಾವಿ ಎಂದು ನವೀಕರಿಸಲಾಗಿತ್ತು. ಇದನ್ನು ವಿರೋಧಿಸಿ ಧಾರವಾಡ ವಲಯ ಕಚೇರಿ ವ್ಯಾಪ್ತಿಯ ಭೂಸಂತ್ರಸ್ತ ರೈತರು 27ರಿಂದ ರಾಯಾಪುರದ ಕೆಐಎಡಿಬಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತಿದ್ದರು.
ಕೆಐಎಡಿಬಿ ಸಿಇಒ ಹೊರಡಿಸಿದ ಪರಿಷತ ಆದೇಶದ ಪ್ರತಿಯನ್ನು ಧರಣಿ ನಿರತ ರೈತರಿಗೆ ಅಧಿಕಾರಿಗಳು ಸೋಮವಾರ ನೀಡಿದರು. ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ರೈತರು ಸಂಭ್ರಮಿಸಿ ಧರಣಿಯನ್ನು ಕೈ ಬಿಟ್ಟರು.