ಶಿವಕುಮಾರ್ ಪಾಟೀಲ್ ಅವರನ್ನು ಅಧೀನ ಅಧಿಕಾರಿಗಳು ಆಸ್ಪತ್ರೆಗೆ ಕಳುಹಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ನೂತನ ಸಭಾಭವನದ ಮೆಟ್ಟಿಲುಗಳ ಮೇಲೆ ನೌಕರನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ಜಿಲ್ಲಾಧಿಕಾರಿ ಕಚೇರಿ ಪಕ್ಕದ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಟೆಕ್ನಿಕಲ್ ಸೂಪರ್ವೈಸರ್ ಶಿವಪ್ರಸಾದ ಪಾಟೀಲ ಆತ್ಮಹತ್ಯೆಗೆ ಯತ್ನಿಸಿದ ನೌಕರ. ಈತ ಎಂದಿನಂತೆ ಕಚೇರಿಗೆ ಹೋಗಿದ್ದ. ಬೆಳಗ್ಗೆಯಿಂದ ಕಚೇರಿಯಲ್ಲಿದ್ದು, ಮಧ್ಯಾಹ್ನದ ನಂತರ ಹೊರಗೆ ಹೋದವನು ಕಚೇರಿಗೆ ಹೋಗಿರಲಿಲ್ಲ. ಸಹೋದ್ಯೋಗಿಗಳು ಪಕ್ಕದ ಜಿಲ್ಲಾಧಿಕಾರಿ ಕಚೇರಿ ಬಳಿ ಹೋಗಿ ನೋಡಿದ್ದಾರೆ. ನೂತನ ಸಭಾಂಗಣದ ಮೆಟ್ಟಿಲುಗಳ ಮೇಲೆ ಚಾಕುವಿನಿಂದ ಕುತ್ತಿಗೆ ಹಾಗೂ ಕೈಗೆ ಇರಿದುಕೊಂಡು ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ. ಮಂಡಳಿಯ ಸಿಬ್ಬಂದಿ ಕೂಡಲೇ ಸ್ಥಳದಲ್ಲಿದ್ದ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ತೀವ್ರ ಗಾಯಗೊಂಡಿದ್ದ ಶಿವಪ್ರಸಾದ ಪಾಟೀಲ ಅವರನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆತ್ಮಹತ್ಯೆ ಯತ್ನಕ್ಕೆ ಕಾರಣ ತಿಳಿದುಬಂದಿಲ್ಲ. ಉಪನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.