kgp job ಹುಬ್ಬಳ್ಳಿಯ ಜೆ.ಜಿ. ಕಾಮರ್ಸ್​ ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ ಉದ್ಯೋಗ ಮೇಳವನ್ನು ಕುಂದಗೋಳ ಕಲ್ಯಾಣಪುರಮಠದ ಶ್ರೀ ಬಸವಣ್ಣಜ್ಜನವರು ಉದ್ಘಾಟಿಸಿದರು. ಶ್ರೀಗಂಧ ಶೇಟ್​, ಇತರರು ಇದ್ದರು. 
ಧಾರವಾಡ

kgp job ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ

ಪ್ರಮುಖ ಮುಖ್ಯಾಂಶಗಳು

  • ಕೆಜಿಪಿ ಫೌಂಡೇಷನ್ ​ನಿಂದ ಬೃಹತ್​ ಮೇಳ
  • ಕುಂದಗೋಳದ ಶ್ರೀ ಬಸವಣ್ಣಜ್ಜರಿಂದ ಉದ್ಘಾಟನೆ
ಹುಬ್ಬಳ್ಳಿ: kgp job ಕೆಜಿಪಿ ಫೌಂಡೇಷನ್​ ವತಿಯಿಂದ ಇಲ್ಲಿಯ ಜೆ.ಜಿ. ಕಾಮರ್ಸ್​ ಕಾಲೇಜು ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಎರಡನೇ ಬೃಹತ್​ ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಅವಳಿನಗರ, ಧಾರವಾಡ ಜಿಲ್ಲೆ ಅಲ್ಲದೇ ವಿವಿಧೆಡೆಯಿಂದ ಅನೇಕ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿ ಉದ್ಯೋಗ ಗಿಟ್ಟಿಸಿಕೊಂಡರು. ಹುಬ್ಬಳ್ಳಿ- ಧಾರವಾಡ ಮಾತ್ರವಲ್ಲ ಮೈಸೂರು, ಬೆಂಗಳೂರು, ಬೆಳಗಾವಿ ಮುಂತಾದೆಡೆಯಿಂದ ಅನೇಕ ಕಂಪನಿಗಳು ಆಗಮಿಸಿ ಸಂದರ್ಶನ ನಡೆಸಿದವು.
ಎಸ್​ಎಸ್​ಎಲ್​ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಸೇರಿ ಎಲ್ಲ ವಿದ್ಯಾರ್ಹತೆಯ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಂಡರು. ಬೆಳಗ್ಗೆ 9 ಗಂಟೆಯಿಂದ ಆರಂಭವಾದ ಮೇಳವು ಸಂಜೆ 4 ಗಂಟೆಯವರೆಗೂ ನಡೆಯಿತು. ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಉದ್ಯೋಗದ ಆಫರ್​ ನೀಡಲಾಗಿದೆ ಎಂದು ಸಂಘಟಕರು ತಿಳಿಸಿದರು.
ಕುಂದಗೋಳ ಕಲ್ಯಾಣಪುರ ಮಠದ ಶ್ರೀ ಬಸವಣ್ಣಜ್ಜನವರು ಬೆಳಗ್ಗೆ ಉದ್ಯೋಗ ಮೇಳ ಉದ್ಘಾಟಿಸಿದರು. ಇಂತಹ ಮೇಳದಿಂದ ಉದ್ಯೋಗಾಕಾಂಕ್ಷಿಗಳಿಗೆ ಬಹಳಷ್ಟು ಅನುಕೂಲವಾಗಲಿದೆ. ಬೆಂಗಳೂರು, ಮೈಸೂರು ಬೇರೆಬೇರೆ ಕಡೆ ಹೋಗಿ ಉದ್ಯೋಗ ಕೇಳುವ ಬದಲು ಇಲ್ಲಿಯೇ ಕಂಪನಿಗಳನ್ನು ಕರೆಸಿರುವುದು ಬಹಳ ಒಳ್ಳೆಯ ಕೆಲಸವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.