ಹುಬ್ಬಳ್ಳಿಗೆ ಶನಿವಾರ ಆಗಮಿಸಿದ್ದ kedara jagdguru ಕೇದಾರ ಜಗದ್ಗುರು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು, ವಿಶ್ವನಾಥ ಹಿರೇಗೌಡರ ದಂಪತಿಯನ್ನು ಗೌರವಿಸಿದರು.
ಹುಬ್ಬಳ್ಳಿ: ಇಲ್ಲಿಯ ಜೆ.ಪಿ. ನಗರದ ಅನುಗ್ರ ಕಟ್ಟಡಕ್ಕೆ kedara jagdguru ಕೇದಾರ ಜಗದ್ಗುರು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ಶನಿವಾರ ಭೇಟಿ ನೀಡಿದರು.
ನಂತರ ಜಗದ್ಗುರುಗಳು, ಕೇದಾರದ ಭವ್ಯ ಇತಿಹಾಸ ಮತ್ತು ಪರಂಪರೆ ಬಗ್ಗೆ ಆಶೀರ್ವಚನ ನೀಡಿದರು.
ಶ್ರೀ ಜಗದ್ಗುರು ರಂಭಾಪುರೀಷ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡರ ದಂಪತಿ, ಜಗದ್ಗುರುಗಳ ಪಾದಪೂಜೆ ನೆರವೇರಿಸಿದರು.
ಜಗಳೂರು ಕಣ್ವಕುಪ್ಪೆ ಗವಿಮಠದ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಹಳೇ ಹುಬ್ಬಳ್ಳಿಯ ಪಂಚಗ್ರಹ ಹಿರೇಮಠದ ಶ್ರೀ ಪ್ರಸಾದ ಸ್ವಾಮೀಜಿ, ಪ್ರಮುಖರಾದ ಸಚಿನ ಪಾಟೀಲ, ಪಂಚಲಿಂಗಪ್ಪ ಕವಲೂರು, ಚನ್ನಯ್ಯ ಚೌಕಿಮಠ, ಗಂಗಾಧರ ಹಿರೇಮಠ, ಎಸ್.ಸಿ. ಕಮ್ಮಾರ, ಶಿವನಗೌಡ ಓಂಕಾರಗೌಡ್ರು, ಸತೀಶ ಹಿರೇಗೌಡರ, ಶಿವಾನಂದ ಮಸಿಹಂಚಿನಾಳ ಉಪಸ್ಥಿತರಿದ್ದರು.