kdem visit ಹುಬ್ಬಳ್ಳಿಯ ಐಬಿಎಂಆರ್ ಸಂಸ್ಥೆಗೆ ಭೇಟಿ ನೀಡಿದ ಕೆಡಿಇಎಂ ಸಿಇಒ ಸಂಜಯ್ ಗುಪ್ತ, ವೈಸ್ ಪ್ರೆಸಿಡೆಂಟ್ ಚೇತನ್ ದೀತ್ ಅವರನ್ನು ಸಂಸ್ಥೆ ಅಧ್ಯಕ್ಷ ವಿನಯಚಂದ್ರ ಮಹೇಂದ್ರಕರ್, ಟ್ರಸ್ಟಿ ಸುಮಾ ಮಹೇಂದ್ರಕರ್ ಸ್ವಾಗತಿಸಿದರು.
- ಐಬಿಎಂಆರ್ ಸಂಸ್ಥೆಗೆ ಕೆಡಿಇಎಂ ಪ್ರತಿನಿಧಿಗಳ ಭೇಟಿ
- ಅಭಿವೃದ್ಧಿ ತಾಂತ್ರಿಕ ಪ್ರಗತಿ ಕುರಿತು ಮಹತ್ವದ ಸಮಾಲೋಚನೆ
ಹುಬ್ಬಳ್ಳಿ: kdem visit ಬೆಂಗಳೂರಿನ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಸಿಇಒ ಸಂಜಯ್ ಗುಪ್ತ ಹಾಗೂ ವೈಸ್ ಪ್ರೆಸಿಡೆಂಟ್ ಚೇತನ್ ದೀಕ್ಷಿತ್ ಅವರು ಗುರುವಾರ ಇಲ್ಲಿಯ ವಿದ್ಯಾನಗರ ಐಬಿಎಂಆರ್ ಸಂಸ್ಥೆಗೆ ಭೇಟಿ ನೀಡಿದರು.
ಉತ್ತರ ಕರ್ನಾಟಕದ ಉದ್ಯಮಶೀಲತೆ, ಕೈಗಾರಿಕಾ ಅಭಿವೃದ್ಧಿ, ತಾಂತ್ರಿಕತೆ, ಸ್ಟಾರ್ಟ್ಅಪ್, ಇನ್ಕ್ಯೂಬೇಶನ್ ಹಾಗೂ ಶೈಕ್ಷಣಿಕ ಪ್ರಗತಿಯ ಕುರಿತು ಮಹತ್ವದ ಸಮಾಲೋಚನೆ ನಡೆಸಿದರು.
ಐಬಿಎಂಆರ್ ಅಧ್ಯಕ್ಷ ವಿನಯಚಂದ್ರ ಮಹೇಂದ್ರಕರ್ ಹಾಗೂ ಗೌರವ ಟ್ರಸ್ಟಿ ಸುಮಾ ಮಹೇಂದ್ರಕರ್ ಅವರು ಪ್ರತಿನಿಧಿಗಳನ್ನು ಸ್ವಾಗತಿಸಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ಕೈಗಾರಿಕಾ ವಲಯದ ವಿಸ್ತರಣೆ, ತಂತ್ರಜ್ಞಾನ ಆಧಾರಿತ ಶಿಕ್ಷಣ, ಕೌಶಲಾಭಿವೃದ್ಧಿ ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸುವ ಅಗತ್ಯವನ್ನು ಕೆಡಿಇಎಂ ಪ್ರತಿನಿಧಿಗಳು ವಿವರಿಸಿದರು.
ವಿದ್ಯಾರ್ಥಿಗಳಲ್ಲಿ ಉದ್ಯಮಶೀಲ ಮನೋಭಾವ, ನವೀನ ಚಿಂತನೆ, ತಾಂತ್ರಿಕ ಕೌಶಲ ಹಾಗೂ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯ ಬೆಳೆಸುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಕೈಗಾರಿಕಾ ವಲಯದೊಂದಿಗೆ ಇನ್ನಷ್ಟು ಬಲವಾದ ಸಹಭಾಗಿತ್ವ ಹೊಂದಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಐಬಿಎಂಆರ್ ಸಂಸ್ಥೆಯೊಂದಿಗೆ ಮುಂದಿನ ದಿನಗಳಲ್ಲಿ ಕೈಗಾರಿಕೆ, ಶಿಕ್ಷಣ, ತಂತ್ರಜ್ಞಾನ ಮತ್ತು ಉದ್ಯಮಶೀಲತೆಯ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಆಶಯವನ್ನು ಅವರು ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕವು ಉದ್ಯಮಶೀಲತೆ ಮತ್ತು ಕೈಗಾರಿಕಾ ಬೆಳವಣಿಗೆಯ ಪ್ರಮುಖ ಕೇಂದ್ರವಾಗಿ ಅಭಿವೃದ್ಧಿಯಾಗಬೇಕು ಎಂಬುದು ಎಲ್ಲರ ಆಶಯ ಎಂದು ತಿಳಿಸಿದರು.
ಉದ್ಯಮಶೀಲತೆ, ಕೈಗಾರಿಕಾ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಐಬಿಎಂಆರ್ ಸಂಸ್ಥೆಯು ತನ್ನ ಕಾರ್ಯಚಟುವಟಿಕೆಗಳನ್ನು ನಿರಂತರವಾಗಿ ವಿಸ್ತರಿಸಲಿ ಎಂದು ಕೆಡಿಇಎಂ ಪ್ರತಿನಿಧಿಗಳು ಆಶಿಸಿದರು.
ಸಂಸ್ಥೆಯ ಸಿಇಒ, ಪ್ರಾಂಶುಪಾಲರು, ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.