kcci meeting ಹುಬ್ಬಳ್ಳಿಯ ಕೆಸಿಸಿಐ ನಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ ಮಾತನಾಡಿದರು. ಉದಯ ರೇವಣಕರ, ಪ್ರವಿಣ ಅಗಡಿ, ಎಸ್​.ಜಿ. ಕಮ್ಮಾರ, ಪ್ರಕಾಶ ಶೃಂಗೇರಿ ಇತರರು ಇದ್ದರು. 
ಧಾರವಾಡ

kcci meeting ಸಾರ್ವಜನಿಕರು ವ್ಯಾಪಾರಸ್ಥರ ಸಮಸ್ಯೆಗೆ ಕೆಸಿಸಿಐ ಧ್ವನಿ

ಪ್ರಮುಖ ಮುಖ್ಯಾಂಶಗಳು

  • ರೈಲ್ವೆ ಮಹಾನಗರ ಪಾಲಿಕೆಗೆ ಪತ್ರ ಬರೆದು ಆಗ್ರಹ
  • ಶೀಘ್ರ ಪರಿಹಾರಕ್ಕೆ ಇಲಾಖೆಗಳಿಗೆ ಮನವಿ
ಹುಬ್ಬಳ್ಳಿ: kcci meeting ರಾಜ್ಯದ ವಿವಿಧ ಭಾಗಗಳಲ್ಲಿ ವ್ಯಾಪಾರಸ್ಥರು, ಉದ್ಯಮಿಗಳು, ರೈತರು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಸಂಬಂಧಿತ ಇಲಾಖೆ ಅಧಿಕಾರಿಗಳು ಶೀಘ್ರ ಪರಿಹಾರ ಮಾಡಬೇಕೆಂದು ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು (ಕೆಸಿಸಿಐ) ಆಗ್ರಹಿಸಿದೆ.
ನಗರದ ಕೆಸಿಸಿಐನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಆಡಳಿತ ಮಂಡಳಿ ಸಭೆಯಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ್ದ ಬೇರೆಬೇರೆ ವಲಯಗಳ ಪ್ರತಿನಿಧಿಗಳು, ಆಯಾ ಭಾಗದ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಪ್ರಯಾಣಿಕರ ಅನುಕೂಲಕ್ಕಾಗಿ ಅಣ್ಣಿಗೇರಿ ರೈಲ್ವೆ ನಿಲ್ದಾಣದಲ್ಲಿ ಕ್ಯಾಂಟೀನ್​ ಸೌಲಭ್ಯ ಕಲ್ಪಿಸುವುದು ಹಾಗೂ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಲಗೇಜ್​ ಸಾಗಿಸುವ ಕೂಲಿಕಾರರು ನಿಗದಿಗಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಪಾರದರ್ಶಕ ದರ ವ್ಯವಸ್ಥೆ ಜಾರಿಗೊಳಿಸುವಂತೆ ಆಗ್ರಹಿಸಲಾಯಿತು.

ಬಿಆರ್​ಟಿಎಸ್​ ಮರುಪರಿಶೀಲಿಸಿ

ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಬಿಆರ್​ಟಿಎಸ್​ ಯೋಜನೆಯಿಂದ ಉಂಟಾಗುತ್ತಿರುವ ಸಂಚಾರ ದಟ್ಟಣೆ, ಅಪಘಾತಗಳು ಮತ್ತು ಸಾರ್ವಜನಿಕರ ದೈನಂದಿನ ತೊಂದರೆಗಳನ್ನು ಪರಿಗಣಿಸಿ ಯೋಜನೆಯ ಕಾರ್ಯಮತೆಯನ್ನು ಮರುಪರಿಶೀಲಿಸಬೇಕು.ಫ್ಲೈ ಓವರ್​ ಕಾಮಗಾರಿ ಸಂಪೂರ್ಣ ಮುಗಿಯುವವರೆಗೆ ಬಿಆರ್​ಟಿಎಸ್​ ಕಾರಿಡಾರ್​ನಲ್ಲಿ ಸಾರ್ವಜನಿಕ ವಾಹನಗಳಿಗೆ ಮುಕ್ತ ಅವಕಾಶ ನೀಡಲು ಸದಸ್ಯರು ಮನವಿ ಮಾಡಿದರು.