kcci award ಸಂಸ್ಥಾಪಕರ ದಿನಾಚರಣೆ ಸಮಿತಿ ಚೇರ್ಮನ್​ ಶಂಕರಣ್ಣ ಮುನವಳ್ಳಿ ಮಾತನಾಡಿದರು. ಜಿ.ಕೆ. ಆದಪ್ಪಗೌಡರ, ಎಸ್​.ಜಿ. ಕಮ್ಮಾರ, ವೀರಣ್ಣ ಕಲ್ಲೂರ, ಉದಯ ರೇವಣಕರ, ಪ್ರಕಾಶ ಶೃಂಗೇರಿ ಇದ್ದರು. 
ಧಾರವಾಡ

kcci award ಆರು ವಾಣಿಜ್ಯೋದ್ಯಮಿಗಳಿಗೆ ವಾಣಿಜ್ಯರತ್ನ ಪ್ರಶಸ್ತಿ

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸಂಸ್ಥಾಪನ ದಿನ
  • ಕೆಸಿಸಿಐನಲ್ಲಿ ಸಮಾರಂಭ ಆಗಸ್ಟ್​ 1ರಂದು
ಹುಬ್ಬಳ್ಳಿ: kcci award ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 98ನೇ ಸಂಸ್ಥಾಪಕರ ದಿನ ಹಾಗೂ ವಾಣಿಜ್ಯರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಗಸ್ಟ್​ 1ರಂದು ಸಂಜೆ 4ಕ್ಕೆ ಆಯೋಜಿಸಲಾಗಿದೆ ಎಂದು ಸಂಸ್ಥಾಪಕರ ದಿನಾಚರಣೆ ಸಮಿತಿ ಚೇರ್ಮನ್​ ಶಂಕರಣ್ಣ ಮುನವಳ್ಳಿ ತಿಳಿಸಿದರು.
ಕೆಸಿಸಿಐ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 1928ರ ಆಗಸ್ಟ್​ 1ರಂದು ಬಾಗಲಕೋಟೆಯಲ್ಲಿ ಮುರಗಯ್ಯಸ್ವಾಮಿ ಜಂಗಿನ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಸ್ಥಾಪನೆಯಾದ ಸಂಸ್ಥೆಯು ಗದಗ ನಂತರ 1947ರಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಗೆ ಸ್ಥಳಾಂತರವಾಯಿತು ಎಂದರು.
ಸಂಸ್ಥೆಯ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ ಮಾತನಾಡಿ, ಸಂಸ್ಥಾಪನ ದಿನಾಚರಣೆ ಅಂಗವಾಗಿ 6 ಜನ ಸಾಧಕ ಉದ್ಯಮಿಗಳಿಗೆ ವಾಣಿಜ್ಯರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹುಬ್ಬಳ್ಳಿಯ ಏಬಲ್​ ಡಿಜೈನ್​ ಆ್ಯಂಡ್​ ಮ್ಯಾನ್ಯುಫ್ಯಾಕ್ಚರಿಂಗ್​ ಲಿಮಿಟೆಡ್​ನ ಗೋವಿಂದ ಜೋಶಿ.
ಬ್ಯಾಡಗಿಯ ಮಾಗನೂರ ಆ್ಯಂಡ್​ ಕಂಪನಿಯ ರಾಜಶೇಖರ ಮಾಗನೂರ, ನಂದಿಕೇಶ್ವರ ಕುಮಾರೇಶ್ವರ ಆಯಿಲ್​ ಇಂಡಸ್ಟ್ರೀಸ್​ ನ ಎಂ.ಬಿ. ಹಂಗರಗಿ, ಹುಬ್ಬಳ್ಳಿಯ ಕಾಟ ಸೀಡ್ಸ್​ ಕಾಪೋರ್ರೇಶನ್​ ನ ಶಾಂತಿಲಾಲ ಓಸ್ತವಾಲ, ಹುಬ್ಬಳ್ಳಿಯ ರಾಜಗುರು ಬುಕ್​ ಮ್ಯಾನ್ಯುಫ್ಯಾಕ್ಚರರ್ಸ್​ನ ಕಾಂತಿಲಾಲ ಪುರೋಹಿತ, ಸವಣೂರಿನ ಪಿ.ವಿ. ಸಿಂಧೂರನ ಸುಮಂತ ಸಿಂಧೂರ ಅವರಿಗೆ ವಾಣಿಜ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು.
ಅಂದು ಮಧ್ಯಾಹ್ನ 3ಕ್ಕೆ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ 4ಕ್ಕೆ ನಡೆಯುವ ಉದ್ಘಾಟನೆ ಸಮಾರಂಭದಲ್ಲಿ ಅತಿಥಿಯಾಗಿ ಶಾಸಕ ಮಹೇಶ ಟೆಂಗಿನಕಾಯಿ ಪಾಲ್ಗೊಳ್ಳುವರು. ಹೊಸಪೇಟೆಯ ಕಿರ್ಲೋಸ್ಕರ್ ಫೆರಸ್​ ಇಂಡಸ್ಟ್ರೀಸ್​ ಲಿಮಿಟೆಡ್​ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಗುಮಾಸ್ತೆ ಉಪನ್ಯಾಸ ನೀಡುವರು ಎಂದರು.
ಉಪಾಧ್ಯಕ್ಷರಾದ ಎಸ್​.ಜಿ. ಕಮ್ಮಾರ, ವೀರಣ್ಣ ಕಲ್ಲೂರ, ಗೌರವ ಕಾರ್ಯದರ್ಶಿ ಉದಯ ರೇವಣಕರ, ಜಂಟಿಗೌರವ ಕಾರ್ಯದರ್ಶಿ ಪ್ರಕಾಶ ಶೃಂಗೇರಿ ಗೋಷ್ಠಿಯಲ್ಲಿದ್ದರು.