Kanakadas college ಹುಬ್ಬಳ್ಳಿಯ ಕನಕದಾಸ ಶಿಕ್ಷಣ ಸಂಸ್ಥೆಯ ಮಹಾವಿದ್ಯಾಲಯದಲ್ಲಿ ಡಾ. ಬಿ.ಎಫ್. ದಂಡಿನ ಅಮರ ನೆನಪು ಕಾರ್ಯಕ್ರಮದಲ್ಲಿ ಡಾ. ಶಾಂತಣ್ಣ ಕಡಿವಾಲ, ಸಂಕೇತ ದಂಡಿನ, ಡಾ. ಬಸವರಾಜ ಮಡ್ಲಿ, ಡಾ. ಎಚ್​.ವಿ. ಬೆಳಗಲಿ, ನಜೀರ ಅಹ್ಮದ ಕೋಲಕಾರ ಇತರರು ಪಾಲ್ಗೊಂಡಿದ್ದರು. 
ಧಾರವಾಡ

Kanakadas college ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ

ಪ್ರಮುಖ ಮುಖ್ಯಾಂಶಗಳು

  • ಡಾ. ಬಿ.ಎಫ್.. ದಂಡಿನ ಅಮರ ನೆನಪು
  • ಡಾ. ಶಾಂತಣ್ಣ ಕಡಿವಾಲ ಶ್ಲಾಘನೆ
ಹುಬ್ಬಳ್ಳಿ: Kanakadas college ಡಾ. ಬಿ.ಎಫ್. ದಂಡಿನ ಅವರ ಬದುಕು ಕೇವಲ ಒಬ್ಬ ವ್ಯಕ್ತಿಯ ಜೀವನ ಚರಿತ್ರೆಯಲ್ಲ, ಅದು ಸೇವೆ ತ್ಯಾಗ ಪರಿಶ್ರಮ ಮಾನವೀಯತೆ ಮತ್ತು ಶಿಕ್ಷಣ ಕ್ರಾಂತ್ರಿಯ ಜೀವಂತ ಇತಿಹಾಸ, ಕನಕದಾಸ ಶಿಕ್ಷಣ ಸಮಿತಿಯನ್ನು ಹುಟ್ಟು ಹಾಕಿ ಸಾವಿರಾರು ಮಕ್ಕಳಿಗೆ ಶಿಕ್ಷಣದ ಬೆಳಕು ನೀಡಿದ್ದಾರೆ, ಅವರ ಸೇವೆ ಸದಾ ಸ್ಮರಣೀಯ ಎಂದು ಕನಕದಾಸ ಶಿಕ್ಷಣ ಸಮಿತಿಯ ಉಪಾಧ್ಯಕ್ಷ ಡಾ. ಶಾಂತಣ್ಣ ಕಡಿವಾಲ ಹೇಳಿದರು.
ಇಲ್ಲಿಯ ವಿದ್ಯಾನಗರ ಕನಕದಾಸ ಶಿಕ್ಷಣ ಸಮಿತಿಯ ಮಹಾವಿದ್ಯಾಲಯಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಡಾ. ಬಿ.ಎಫ್.. ದಂಡಿನ ಅವರ ಅಮರ ನೆನಪು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯೆಯೇ ಜೀವನವನ್ನು ಬದಲಾಯಿಸುವ ಶಕ್ತಿ ಎಂಬ ನಂಬಿಕೆಯನ್ನು ಅವರು ಎಂದಿಗೂ ಕೈಬಿಡಲಿಲ್ಲ.ಶಿಕ್ಷಣ, ಸಮಾಜಸೇವೆ ಹಾಗೂ ಸಾರ್ವಜನಿಕ ಬದುಕಿನಲ್ಲಿ ತಮ್ಮದೇ ಆದ ಸೇವಾ ಮನೋಭಾವದಿಂದ ಅಪಾರ ಗೌರವಕ್ಕೆ ಪಾತ್ರರಾಗಿದ್ದರು ಎಂದರು.