ಜೆಎಸ್​ಎಸ್ ವಿದ್ಯಾಥಿರ್ಗಳ ಸನ್ಮಾನ 
ಧಾರವಾಡ

ಜೆಎಸ್​ಎಸ್​ ಪ್ರತಿಭಾವಂತರಿಗೆ ಸನ್ಮಾನ

ಮಂಜುನಾಥ ಅಂಗಡಿ
ಧಾರವಾಡ: ವಿದ್ಯಾಥಿರ್ಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇದರಿಂದ ವ್ಯಕ್ತಿತ್ವ ಪರಿರ್ಪೂಣವಾಗುತ್ತದೆ. ಸಂಸ್ಥೆಯಲ್ಲಿ ದೊರೆಯುತ್ತಿರುವ ಸೌಲಭ್ಯ, ಪ್ರೋತ್ಸಾಹವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜೆಎಸ್​ಎಸ್​ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಕವಿವಿ ಅಥ್ಲೆಟಿಕ್ಸ್​ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದ ಜೆಎಸ್​ಎಸ್​ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಕ್ರೀಡಾಪಟುಗಳು ಹಾಗೂ ಅಂತರ ವಲಯ ವಿಶ್ವವಿದ್ಯಾಲಯಗಳ ಸಾಂಸತಿಕ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಜೆಎಸ್​ಎಸ್​ ಪದವಿ ಕಾಲೇಜಿನ ವಿದ್ಯಾಥಿರ್ಗಳನ್ನು ಬುಧವಾರ ಸನ್ಮಾನಿಸಿ ಅವರು ಮಾತನಾಡಿದರು.
ಅವಕಾಶಗಳು ದೊರೆತಾಗ ಅದರ ಉಪಯೋಗ ಮಾಡಿಕೊಳ್ಳಬೇಕು. ಸಂಸ್ಥೆಯ ಸಾಧನೆಯ ಪರಂಪರೆ ಇದೇರೀತಿ ಮುಂದುವರಿಯಬೇಕು. ಕಲೆ, ಸಂಸತಿ, ಆಟ ಇವು ವಿದ್ಯಾಥಿರ್ಯ ಅವಿಭಾಜ್ಯ ಅಂಗವಾಗಬೇಕು. ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೂ ಇವು ಅವಶ್ಯಕ ಎಂದರು.
ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಎನ್​ಎಸ್​ಎಸ್​ ಪರೇಡ್​ನಲ್ಲಿ ಕರ್ನಾಟಕ ತಂಡದ ನಾಯಕರಾಗಿ ಭಾಗವಹಿಸಿದ್ದ ಕೆ.ಎಚ್​. ಕಬ್ಬೂರ ಕಾಲೇಜಿನ ಎನ್​ಎಸ್​ಎಸ್​ ಅಧಿಕಾರಿ ಈರಪ್ಪ ಪತ್ತಾರ ಮತ್ತು ರಾಷ್ಟ್ರಮಟ್ಟದ ಗಣರಾಜ್ಯೋತ್ಸವ ಪರೇಡ್​ನಲ್ಲಿ ಭಾಗವಹಿಸಿದ್ದ ಪದವಿ ಕಾಲೇಜಿನ ಎನ್​ಸಿಸಿ ವಿದ್ಯಾಥಿರ್ ಮಂಜುನಾಥ ದೇವರೆಡ್ಡಿ ಅವರನ್ನು ಸನ್ಮಾನಿಸಲಾಯಿತು.