joshi statment ಹುಬ್ಬಳ್ಳಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವ ಪ್ರಲ್ಹಾದ ಜೋಶಿ. 
ಧಾರವಾಡ

joshi statment ನಾಟಿಕೋಳಿ ವಿಚಾರವೇ ಚರ್ಚೆಯಾಗುವುದು ದುರ್ದೈವದ ಸಂಗತಿ

ಬಸವರಾಜ ಎಸ್. ಇದ್ಲಿ

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆ
  • ಕಾಂಗ್ರೆಸ್​ ಹೈಕಮಾಂಡ್​ ಯಾವುದೇ ಕಮಾಂಡ್​ ಇಲ್ಲದ ಹೈ
  • ಅರಾಜಕತೆ ಸ್ಥಿತಿ ಉಂಟಾಗಿದೆ
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಟಿ ಕೋಳಿ ಇವರು ತಿಂದರು, ಅವರು ತಿಂದರು ಎನ್ನುವುದೇ ಬಹುದೊಡ್ಡ ಚರ್ಚೆಯಾಗಿದೆ. ಅಧಿಕಾರ ಹಂಚಿಕೆ ಕುರಿತ ಚರ್ಚೆಗೆ ಪೂರ್ಣವಿರಾಮ ಹಾಕಿದ್ದೇವೆ ಎಂದು ಯಾರೂ ಎಲ್ಲಿಯೂ ಹೇಳುತ್ತಿಲ್ಲ. ಕಾಂಗ್ರೆಸ್​ ಹೈಕಮಾಂಡ್​ ಯಾವುದೇ ಕಮಾಂಡ್​ ಇಲ್ಲದ ಹೈ ಆಗಿದೆ. ಅತ್ಯಂತ ದುರ್ಬಲವಾಗಿದೆ ಎಂದು ಲೇವಡಿ ಮಾಡಿದರು.
ಶಾಸಕರ ವ್ಯಾಪಾರದ ಮಧ್ಯೆ ಈಗ ವಾಚ್​ ಬಗ್ಗೆಯೂ ಚರ್ಚೆ ನಡೆದಿದೆ. 40/ 45 ಲಕ್ಷ ರೂಪಾಯಿ ವಾಚ್​ ಕಟ್ಟಿದ್ದಾರೆ. ಕ್ರೆಡಿಟ್​ ಕಾರ್ಡ್​ ಮೂಲಕ ತೆಗೆದುಕೊಂಡಿರುವುದಾಗಿ ಡಿಸಿಎಂ ಡಿಕೆಶಿ ಹೇಳಿದ್ದರೆ, ಸಿಎಂ ಸಿದ್ದರಾಮಯ್ಯ ಮಾತ್ರ ಇದುವರೆಗೂ ಬಾಯಿ ಬಿಟ್ಟಿಲ್ಲ. ಹಾಗಿದ್ದರೆ ವಾಚ್​ ಪುಗಸಟ್ಟೆ ಬಂದಿದೆಯೇ? ಸಮಾಜವಾದಿ ಎಂದು ಹೇಳುವವರು ಮಜಾವಾದಿ ಆಗಿದ್ದಾರೆಯೇ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಎಲ್ಲ ರಂಗದಲ್ಲಿಯೂ ವಿಫಲವಾಗಿದೆ. ಅರಾಜಕತೆ ಸ್ಥಿತಿ ಉಂಟಾಗಿದೆ. ಜನವರಿ 15ರ ನಂತರ ರಾಜ್ಯದ ಬಿಕ್ಕಟ್ಟಿನ ತೀರ್ಮಾನ ಮಾಡುವುದಾಗಿ ಹೇಳುತ್ತಿದ್ದಾರೆ. ಇದುವರೆಗೂ ಎಷ್ಟು ಜನವರಿ ಬಂದವೋ ಇನ್ನೂ ಎಷ್ಟು ಬರಲಿವೆಯೋ ಗೊತ್ತಿಲ್ಲ. ಕಾಂಗ್ರೆಸ್​ ಹೈಕಮಾಂಡ್​ ಮಾತ್ರ ಅಸಹಾಯಕವಾಗಿದೆ ಎಂದು ಗೇಲಿ ಮಾಡಿದರು.

ಪೂರ್ಣ ಹಣ ವಾಪಸ್​: