mango ಮಾವಿನ ಬೆಳೆಗೆ ಪರಿಹಾರ ನೀಡಲು ಜೋಶಿ ಸೂಚನೆ
- ಬೆಳೆಗಾರರ ಆದಾಯಕ್ಕೆ ಹೊಡೆತ ಬಿದ್ದಿದೆ.
- ಪ್ರತಿ ರೈತರ ಜಮೀನಿಗೆ ಭೇಟಿ ನೀಡಿ.
- ಗಾಯದ ಮೇಲೆ ಬರೆ ಎಳೆದಂತಾಗಿದೆ.
ಹೂವು ಉದುರುವುದು, ಮಿಡಿ ಕೀಟಗಳ ಬಾಧೆ ಮತ್ತು ಕಾಯಿ ಕೊಳೆಯುವಿಕೆ ಹೆಚ್ಚಾಗಿದ್ದು, ಈ ವರ್ಷದ ಫಸಲಿನ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗುವ ಭೀತಿಯನ್ನು ರೈತರು ಎದುರಿಸುತ್ತಿದ್ದಾರೆ. ಇದರಿಂದ ಬೆಳೆಗಾರರ ಆದಾಯಕ್ಕೆ ಹೊಡೆತ ಬಿದ್ದಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಬೆಳೆ ಹಾನಿ ಸಮೀಕ್ಷೆ :ಕಂದಾಯ ಇಲಾಖೆ ಮತ್ತು ತೋಟಗಾರಿಕಾ ಇಲಾಖಾ ಅಧಿಕಾರಿಗಳು ಕೂಡಲೇ ಹಾನಿಗೊಳಗಾದ ಪ್ರತಿ ರೈತರ ಜಮೀನಿಗೆ ಭೇಟಿ ನೀಡಿ, ಬೆಳೆ ಹಾನಿಯ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಬೇಕೆಂದು ಸಚಿವ ಜೋಶಿ ಸೂಚಿಸಿದ್ದಾರೆ.
ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಎನ್ಡಿಆರ್ಎಫ್ ನಿಧಿಯಿಂದ ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ.
ಕಲಘಟಗಿ ಹಾಗೂ ಸುತ್ತ್ತನ ಗ್ರಾಮಗಳಲ್ಲಿ ಹುಲುಸಾಗಿ ಬೆಳೆದಿದ್ದ ಅಪಾರ ಪ್ರಮಾಣ ಮಾವಿನ ಫಸಲು ಮಂಗಳವಾರ ಸಂಜೆ ಸುರಿದ ಅಕಾಲಿಕ ಮಳೆ ಜತೆ ಆಲಿಕಲ್ಲು ರಭಸಕ್ಕೆ ನೆಲಕ್ಕುರಳಿ, ಕೈಗೆ ಬಂದ ತುತ್ತು ಬಾಯಿಗೆ ಬರದೆ ರೈತ ಸಂಕಷ್ಟಕ್ಕೀಡಾಗಿದ್ದಾನೆ.
ಈ ಸಲ ಬಂಪರ್ ಫಸಲು ನೀಡಬಹುದೆಂಬ ಆಶಾಭಾವನೆ ರೈತ ಸಮುದಾಯದಲ್ಲಿ ಮೂಡಿಸಿತ್ತು. ಆದರೆ, ಅಕಾಲಿಕ ಆಲಿಕಲ್ಲು ಮಳೆ ಎಲ್ಲವನ್ನೂ ನಾಶ ಪಡಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.