job fair ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪುಷ್ಪಾ ಬಸನಗೌಡರ,. 
ಧಾರವಾಡ

ಮಹಾಂತ ಕಾಲೇಜಿನಲ್ಲಿ ಉದ್ಯೋಗ ಮೇಳ ಆ. 11ಕ್ಕೆ job fair

ಪ್ರಮುಖ ಮುಖ್ಯಾಂಶಗಳು

  • 35ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ.
  • ಕಳೆದ ವರ್ಷ 450ಕ್ಕೂ ಹೆಚ್ಚು ಜನ ಉದ್ಯೋಗ ಪಡೆದುಕೊಂಡಿದ್ದರು
  • ಸುಮಾರು 700 ಜನರು ಹೆಸರು ನೋಂದಾಯಿಸಿಕೊಂಡಿದ್ದಾರೆ.
ಶನಿವಾರದಂದು ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪುಷ್ಪಾ ಬಸನಗೌಡರ, ಅಂದು ಬೆಳಗ್ಗೆ 11 ಗಂಟೆಗೆ ಶಾಸಕರಾದ ಅರವಿಂದ ಬೆಲ್ಲದ ಹಾಗೂ ಮಹೇಶ ಟೆಂಗಿನಕಾಯಿ ಉದ್ಘಾಟನೆ ನೆರವೇರಿಸುವರು ಎಂದರು.
ಹುಬ್ಬಳ್ಳಿ, ಧಾರವಾಡ ಹಾಗೂ ಬೆಂಗಳೂರಿನ 35ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ. ಎಸ್​ಎಸ್​ಎಲ್​ಸಿಯಿಂದ ಉನ್ನತ ಶಿಕ್ಷಣ ಪಡೆದವರು ಭಾಗವಹಿಸಬಹುದು ಎಂದು ತಿಳಿಸಿದರು.
ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ. ಜಯಲಕ್ಷ್ಮೀ ಯಂಡಿಗೇರಿ ಮಾತನಾಡಿ, ಮಹಾವಿದ್ಯಾಲಯದಲ್ಲಿ ಆಯೋಜಿಸುವ ಮೂರನೇ ಉದ್ಯೋಗ ಮೇಳ ಇದಾಗಿದೆ. ಕಳೆದ ವರ್ಷ 1,500 ಜನ ಭಾಗವಹಿಸಿದ್ದು, 450ಕ್ಕೂ ಹೆಚ್ಚು ಜನ ಉದ್ಯೋಗ ಪಡೆದುಕೊಂಡಿದ್ದರು ಎಂದು ತಿಳಿಸಿದರು.
ಮತ್ತೊಂದು ಬಾರಿ ಮಹಿಳೆಯರಿಗಾಗಿ ಮಾತ್ರ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ 300 ಕ್ಕೂ ಹೆಚ್ಚು ಜನ ಉದ್ಯೋಗ ಪಡೆದುಕೊಂಡಿದ್ದರು ಎಂದರು.
ಇದುವರೆಗೆ ಸುಮಾರು 700 ಜನರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಸ್ಥಳದಲ್ಲೇ ನೇರ ಸಂದರ್ಶನ, ಮಾರ್ಗದರ್ಶನ ದೊರೆಯಲಿದ್ದು, ಸಮಯ ಹಾಗೂ ಪ್ರಯಾಣ ವೆಚ್ಚ ಉಳಿತಾಯವಾಗಲಿದೆ ಎಂದು ತಿಳಿಸಿದರು.
ಪ್ಲೇಸ್​ವೆುಂಟ್ ಸೆಲ್ ಸಂಯೋಜಕ ಪ್ರೊ. ಜಿ.ಸಿ. ಕಡ್ಡಿಪುಡಿ, ಪ್ರಥಮ ಎಜುಕೇಷನ್ ಫೌಂಡೇಷನ್​ನ ಪ್ರದೀಪ ಹಾಗೂ ವೆಂಕಟರಮಣ ಸುದ್ದಿಗೋಷ್ಠಿಯಲ್ಲಿ ಇದ್ದರು.