jito donation ಹುಬ್ಬಳ್ಳಿಯ ಪೂರ್ವ ಸಂಚಾರ ಠಾಣೆಗೆ ಜಿತೋ ಚಾಪ್ಟರ್ ಫೌಂಡೇಷನ್ ವತಿಯಿಂದ ಕಂಪ್ಯೂಟರ್ ದೇಣಿಗೆ ನೀಡಲಾಯಿತು. ಅನಿಲಕುಮಾರ ಜೈನ್, ಭವರಲಾಲ್ ಸಿ. ಜೈನ್, ಪ್ರವಿಣ ಚೌಧರಿ, ಮಹೇಂದ್ರ ಪಾಲ್ಗೊಟ ಇತರರು ಇದ್ದರು.
ಹುಬ್ಬಳ್ಳಿ: jito donation ಇಲ್ಲಿಯ ಜಿತೋ ಚಾಪ್ಟರ್ ಫೌಂಡೇಷನ್ ವತಿಯಿಂದ ಕುಸುಗಲ್ ರಸ್ತೆಯಲ್ಲಿರುವ ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ 80ನೇ
ಸ್ವಾತಂತ್ರ್ಯೋತ್ಸವವನ್ನು ವಿಶಿಷ್ಟ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು.
ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿರುವ ಸರ್ಮಪಿತ ಪೊಲೀಸ್ ಸಿಬ್ಬಂದಿಗೆ ಗೌರವ ಸಲ್ಲಿಸಲಾಯಿತು.
ನಿವೃತ್ತರಾಗಿ ಪೊಲೀಸ್ ಇಲಾಖೆಗೆ ಸೇರುವ ಮೂಲಕ ರಾಷ್ಟ್ರಕ್ಕೆ ತಮ್ಮ ಸೇವೆ ಮುಂದುವರಿಸಿದ ಅಧಿಕಾರಿಗಳನ್ನು ಗೌರವಿಸಲಾಯಿತು.
ಜಿತೋ ಅಧ್ಯಕ್ಷ ಅನಿಲಕುಮಾರ ಜೈನ್, ಸಂಚಾರ ಪೊಲೀಸರು ಅನೇಕ ಸವಾಲುಗಳ ಮಧ್ಯೆ ಕಾರ್ಯ ನಿರ್ವಹಿಸುತ್ತಾರೆ. ಸಂಚಾರ ಶಿಸ್ತು ಕಾಯ್ದುಕೊಳ್ಳುವುದು, ರಸ್ತೆ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸುವುದು ಮತ್ತು ನಾಗರಿಕರಲ್ಲಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಅವರ ಪ್ರಯತ್ನಗಳು ಅನೇಕ ಎಂದು ಶ್ಲಾಘಿಸಿದರು.
ಪ್ರತಿಷ್ಠಾನದ ಮುಖ್ಯ ಕಾರ್ಯದರ್ಶಿ ಪ್ರವಿಣ ಚೌಧರಿ, ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ ಆಚರಣೆ ಸಲುವಾಗಿ ಠಾಣೆಗೆ ಬೇಕಾದ ಸಿಸ್ಟ್ಂ ಕೊಡಿಸಲು ಮುಂದಾದೇವು. ಪೊಲೀಸ್ ಸಿಬ್ಬಂದಿಗೆ ಇದರಿಂದ ನೆರವಾಗಲಿದೆ ಎಂದರು.
ಭವರಲಾಲ್ ಸಿ. ಜೈನ್, ಮಹೇಂದ್ರ ಪಾಲ್ಗೋಟ, ಅಶೋಕ್ ಭಂಡಾರಿ, ಅಕ್ಷಯ್ ಶಾ, ಭರತ್ ಪಟ್ವಾರಿ, ಧನರಾಜ್ ಭಂಡಾರಿ, ರಾಜನ್ ಜೈನ್, ಅಮೃತ್ ಜೈನ್, ನವೀನ್ ಖಿವೆಸ್ರಾ, ನರೇಶ್ ಮೆಹ್ತಾ, ಅಕ್ಷಯ್ ಬಾಗ್ರೆಚಾ, ನೀರವ್ ಮೊಮಯಾ, ಗೀತಾ ಚೆಡ್ಡಾ, ಅಧಿಕಾರಿಗಳು ಮತ್ತು ಫೌಂಡೇಷನ್ ಸದಸ್ಯರು ಭಾಗವಹಿಸಿದ್ದರು.