jewelry stolen ಕಸಬಾಪೇಟೆ ಪೊಲೀಸ್ ಠಾಣೆ
ಹುಬ್ಬಳ್ಳಿ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಬ್ಯಾಗ್‌ನಲ್ಲಿದ್ದ
1.49 ಲಕ್ಷ ರೂ. ಮೌಲ್ಯದ ಬಂಗಾರ ಆಭರಣ ಕಳವಾಗಿದ್ದರ ಕುರಿತು ಇಲ್ಲಿಯ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾದೇವಿ ಎಂಬುವವರು ಗಬ್ಬೂರ ವೃತ್ತದಿಂದ ಬೆಂಗಳೂರು ಬಸ್ ಹತ್ತಿ ಬ್ಯಾಡಗಿಗೆ ಹೋಗುತ್ತಿದ್ದರು. ಅವರ ಬ್ಯಾಗ್‌ನಲ್ಲಿದ್ದ 1.30 ಲಕ್ಷ ರೂ. ಮೌಲ್ಯದ 35 ಗ್ರಾಂ ಚಿನ್ನದ ಮಾಂಗಲ್ಯ ಹಾಗೂ 19 ಸಾವಿರ ರೂ. ಮೌಲ್ಯದ 2.5 ಗ್ರಾಂ ಉಂಗುರ ಯಾರೋ ಕಳವು ಮಾಡಿದ್ದಾರೆ ಎಂದು ಮಹಾದೇವಿ ದೂರಿನಲ್ಲಿ ತಿಳಿಸಿದ್ದಾರೆ.