ಮದುವೆ ಸಮಾರಂಭಕ್ಕೆ ಆಗಮಿಸಿದ್ದ ಮಹಿಳೆಯೊಬ್ಬರ 2.95 ಲಕ್ಷ ರೂ. ಮೌಲ್ಯದ 35 ಗ್ರಾಂ (Jewelry) ಆಭರಣ ಕಳವಾದ ಪ್ರಕರಣ.
ಹುಬ್ಬಳ್ಳಿ: ಇಲ್ಲಿಯ ಉಣಕಲ್ ಶ್ರೀನಗರ ಹತ್ತಿರದ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮದುವೆ ಸಮಾರಂಭಕ್ಕೆ ಆಗಮಿಸಿದ್ದ ಮಹಿಳೆಯೊಬ್ಬರ 2.95 ಲಕ್ಷ ರೂ. ಮೌಲ್ಯದ 35 ಗ್ರಾಂ ಆಭರಣ ಕಳವಾಗಿದೆ.
ರಾಣೆಬೆನ್ನೂರು ಮೂಲದ ವಿದ್ಯಾವತಿ ಎಂಬುವವರ ಆಭರಣ ಕಳವಾಗಿದೆ. ನ. 13ರಂದು ಪ್ರೆಸಿಡೆಂಟ್ ಹೋಟೆಲ್ನ ನೆಲ ಮಹಡಿಯ ಹಾಲ್‌ನಲ್ಲಿ ರಾತ್ರಿ ವೇಳೆ ಕಳ್ಳರು, ಮಹಿಳೆಯ 30 ಗ್ರಾಂ ತೂಕದ ಪದಕದ ಸರ, 5 ಗ್ರಾಂ ನೆಲ್ಲಿಕಾಯಿ ಗುಂಡಿನ ಸರ, 15 ಸಾವಿರ ರೂ. ಹಣವಿದ್ದ ವ್ಯಾನಿಟಿ ಬ್ಯಾಗ್ ದೋಚಿಕೊಂಡು ಪರಾರಿಯಾಗಿದ್ದರ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.