jds conference ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಶಿಮರದ ಮಾತನಾಡಿದರು. 
ಧಾರವಾಡ

jds conference ಜೆಡಿಎಸ್​ ಬೆಳ್ಳಿಹಬ್ಬಕ್ಕೆ ಧಾರವಾಡ ಕಾರ್ಯಕರ್ತರು

ಪ್ರಮುಖ ಮುಖ್ಯಾಂಶಗಳು

  • ಮಹಾನಗರ ಜಿಲ್ಲಾಧ್ಯಕ್ಷ ಹುಣಶಿಮರದ ಹೇಳಿಕೆ
  • ಅಭಿವೃದ್ಧಿ ಕೆಲಸಗಳು ಸರ್ಕಾರದಲ್ಲಿ ಆಗುತ್ತಿಲ್ಲ
ಹುಬ್ಬಳ್ಳಿ: jds conference ವಿಜಯಪುರ ಜಿಲ್ಲೆಯಲ್ಲಿ ಫೆ. 27ರಂದು ನಡೆಯಲಿರುವ ಜಾತ್ಯತಿತ ಜನತಾದಳ ಬೆಳ್ಳಿ ಹಬ್ಬ ಸಮಾರಂಭದಲ್ಲಿ ಜಿಲ್ಲೆಯಿಂದ ಅನೇಕ ಮುಖಂಡರು, ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಶಿಮರದ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ, ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಏಪ್ರಿಲ್​- ಮೇ ನಲ್ಲಿ ಸಮಾವೇಶ ಏರ್ಪಡಿಸಲು ನಿರ್ಧರಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಇಂತಹ ಕಾರ್ಯಕ್ರಮ ಮಾಡಲಾಗುತ್ತಿದ್ದು, ಜೆಡಿಎಸ್​ ವರಿಷ್ಠರು ಇದರಲ್ಲಿ ಪಾಲ್ಗೊಳ್ಳುವರು. ಯುವ ಮುಖಂಡ ನಿಖಿಲ್​ ಕುಮಾರಸ್ವಾಮಿ ಅವರು ಪಕ್ಷ ಸದೃಢಗೊಳಿಸುವ ದಿಸೆಯಲ್ಲಿ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂದರು.