jain winners ವಿಜಯಪಥ ಯುವಜನೋತ್ಸವದಲ್ಲಿ ಗ್ರ್ಯಾಂಡ್ ಚಾಂಪಿಯನ್​ಶಿಪ್​ ಪಡೆದ ಹುಬ್ಬಳ್ಳಿಯ ಜೈನ್​ ಪದವಿ ಕಾಲೇಜಿನ ವಿದ್ಯಾರ್ಥಿಗಳು. ಡಾ. ಮಾಯಾ ಕುಲಹಳ್ಳಿ ಇದ್ದಾರೆ. 
ಧಾರವಾಡ

jain winners ಜೈನ್ ಕಾಲೇಜಿಗೆ ಗ್ರ್ಯಾಂಡ್ ಚಾಂಪಿಯನ್ ಶಿಪ್

ಹುಬ್ಬಳ್ಳಿ: jain winners ಇಲ್ಲಿಯ ಕೆಎಲ್​ಇ ಸಿಬಿಎ ಆಯೋಜಿಸಿದ್ದ ಅಂತರ -ಕಾಲೇಜು ಯುವಜನೋತ್ಸವ "ವಿಜಯಪಥ'ದಲ್ಲಿ ನಗರದ ಜೈನ್​ ಪದವಿ ಕಾಲೇಜಿನ ವಿದ್ಯಾರ್ಥಿಗಳು ಗ್ರ್ಯಾಂಡ್​ ಚಾಂಪಿಯನ್​ಶಿಪ್​ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ಅಂತರ ಕಾಲೇಜು ಯುವಜನೋತ್ಸವದಲ್ಲಿ ವಿವಿಧೆಡೆಯಿಂದ ಹತ್ತಾರು ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿವಿಧ ಸುತ್ತುಗಳಲ್ಲಿ ಜೈನ್​ ಕಾಲೇಜ್​ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ತೋರಿದರು. ಅನೇಕ ಬಹುಮಾನಗಳನ್ನು ಗೆದ್ದಿದ್ದಾರೆ.
ತನಿಷ್ಕ ಜೈನ್​ ಪ್ರಜಾಪಾಲಕ ವಿಭಾಗದಲ್ಲಿ ಪ್ರಥಮ, ಪೂಜಾ ಜೈನ್​ ನಾರದ ವಿಭಾಗದಲ್ಲಿ ದ್ವಿತೀಯ, ಸಯ್ಯಮ ಚೋಪ್ರಾ ಕೌಟಿಲ್ಯದಲ್ಲಿ ದ್ವಿತೀಯ, ಪಕ್ಷಾಲ ಡಿ. ಕ್ರಿಯಾ ಚಕ್ರವರ್ತಿಯಲ್ಲಿ ದ್ವಿತೀಯ.
ಏನಮ್​ ಜೈನ್​ ದಕ್ಷಿಣಪಥೇಶ್ವರ ವಿಭಾಗದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ ಎಂದು ಪ್ರಾಚಾರ್ಯ ಡಾ. ಮಾಯಾ ಕುಲಹಳ್ಳಿ ತಿಳಿಸಿದ್ದಾರೆ.
ಜೈನ್ ಕಾಲೇಜಿನ ವಿದ್ಯಾರ್ಥಿಗಳ ಈ ಅದ್ವಿತೀಯ ಸಾಧನೆಗೆ ಕಾಲೇಜು ಆಡಳಿತ ಮಂಡಳಿ ಪದಾಧಿಕಾರಿಗಳು, ಪ್ರಾಧ್ಯಾಪಕರು, ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.