jain vaibhav ಹುಬ್ಬಳ್ಳಿಯ ಜೈನ್​ ತಾಂತ್ರಿಕ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವೈಭವ ಕಾರ್ಯಕ್ರಮದಲ್ಲಿ ಪ್ರೊ. ಸಿದ್ದು ಯಾಪಲಪರವಿ, ಡಾ. ಪ್ರಶಾಂತ ಬಣಕಾರ, ಇತರರು ಪಾಲ್ಗೊಂಡಿದ್ದರು. 
ಧಾರವಾಡ

jain vaibhav ವಿದ್ಯಾರ್ಥಿಗಳು ಒತ್ತಡ ನಿರ್ವಹಣೆಗೆ ಆದ್ಯತೆ ನೀಡಲಿ

ಪ್ರಮುಖ ಮುಖ್ಯಾಂಶಗಳು

  • ಹಿರಿಯ ಲೇಖಕ ಪ್ರೊ. ಸಿದ್ದು ಯಾಪಲಪರವಿ ಹೇಳಿಕೆ
  • ತಾಂತ್ರಿಕ ಮಹಾವಿದ್ಯಾಲಯದಲ್ಲಿ ವೈಭವ ಕಾರ್ಯಕ್ರಮ
ಹುಬ್ಬಳ್ಳಿ: jain vaibhav ವಿದ್ಯಾರ್ಥಿಗಳು ಒತ್ತಡ ನಿರ್ವಹಣೆಗೆ (ಸ್ಟ್ರೆಸ್​ ಮ್ಯಾನೇಜಮೆಂಟ್​) ಆದ್ಯತೆ ನೀಡಿ, ಓದಿನತ್ತ ಗಮನ ಹರಿಸಬೇಕು ಎಂದು ಹಿರಿಯ ಲೇಖಕ ಪ್ರೊ. ಸಿದ್ದು ಯಾಪಲಪರವಿ ಹೇಳಿದರು.
ಇಲ್ಲಿಯ ಉಣಕಲ್​ ಸಾಯಿನಗರ ಬಳಿಯ ಜೈನ್​ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವೈಭವ 2ಕೆ26 ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.
ಪೋಷಕರು ಮಕ್ಕಳ ಮೇಲೆ ಹೆಚ್ಚಿನ ಹೊರೆ ಹಾಕಬಾರದು. ಅಧ್ಯಯನದ ಜತೆಗೆ ವಿವಿಧ ಕೌಶಲಗಳನ್ನು ಮಕ್ಕಳು ಮೈಗೂಡಿಸಿಕೊಳ್ಳಬೇಕು. ಉತ್ತಮ ಭವಿಷ್ಯದ ಬಗ್ಗೆ ಆಲೋಚನೆ ಮಾಡಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ ಬಣಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸ್ಪರ್ಧಾ ಮನೋಭಾವದಿಂದ ವಿದ್ಯಾರ್ಥಿಗಳು ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು. ವೈಭವದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ತಾಂತ್ರಿಕ ಕಾರ್ಯಕ್ರಮಗಳು ನಡೆದವು.
ಕೊನೆಯ ವರ್ಷದ ಇಂಜಿನಿಯರಿಂಗ್​ ಪದವಿ ಹಾಗೂ ಎಂಬಿಎ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ವಿವಿಧ ವಿಭಾಗದ ಮುಖ್ಯಸ್ಥರು, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.