ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಜಗ್ಗಲಗಿ ( Jaggalagi ) ಹಬ್ಬದ ಪೂರ್ವಭಾವಿ ಸಭೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿದರು.
- ಹರಿಯಾಣ ರಾಜ್ಯದಿಂದ ಜಗ್ಗಲಗಿ ವಾದ್ಯ ಮೇಳ ತಂಡ ಪಾಲ್ಗೊಳ್ಳಲಿದೆ.
- ರಾಜ್ಯದ ವಿವಿಧೆಡೆ ವಾದ್ಯ ಮೇಳ ತಂಡಗಳು ಭಾಗವಹಿಸಲಿವೆ.
- ಉತ್ತರ ಕರ್ನಾಟಕದ ಜನಪ್ರಿಯ ಹಬ್ಬವಾಗಿದೆ.
- ಮಾರ್ಚ್ 5ಕ್ಕೆ ಹುಬ್ಬಳ್ಳಿ ಜಗ್ಗಲಗಿ ಹಬ್ಬ.
ಹುಬ್ಬಳ್ಳಿ ಜಗ್ಗಲಗಿ ಹಬ್ಬದ ಸಮಿತಿ ವತಿಯಿಂದ ಇಲ್ಲಿನ ಮೂರುಸಾವಿರ ಮಠದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಜಗ್ಗಲಗಿ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಮಾರ್ಚ್ 5ಕ್ಕೆ ಹುಬ್ಬಳ್ಳಿ ಜಗ್ಗಲಗಿ ಹಬ್ಬ 15ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಬಾರಿ ಹರಿಯಾಣ ರಾಜ್ಯದಿಂದ ಜಗ್ಗಲಗಿ ವಾದ್ಯ ಮೇಳ ತಂಡ ಪಾಲ್ಗೊಳ್ಳಲಿದೆ.
ಇದರೊಂದಿಗೆ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧೆಡೆ ವಾದ್ಯ ಮೇಳ ತಂಡಗಳು ಭಾಗವಹಿಸಲಿವೆ ಎಂದು ಹೇಳಿದರು.
ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಸತೀಶ ಶೇಜವಾಡಕರ, ಮಂಜುನಾಥ ಕಾಟಕರ, ಸುಭಾಷಸಿಂಗ ಜಮಾದಾರ, ಸಿದ್ದು ಮೊಗಲಿಶೆಟ್ಟರ, ರವಿ ನಾಯಕ ಹಾಗೂ ಇತರರು ಇದ್ದರು.