ಜಗಜ್ಯೋತಿ ಬಸವೇಶ್ವರ ಜಯಂತಿ 
ಧಾರವಾಡ

ಜಗಜ್ಯೋತಿ ಬಸವೇಶ್ವರ ಜಯಂತಿ

ಸಮಾಜದ ಐಕ್ಯತೆಗೆ ಬೆಳಕಾಗಿ ಬಂದವರು ಬಸವಣ್ಣ
ಧಾರವಾಡ: ಬಸವಣ್ಣನವರು ಮಹಾನ್​ ತತ್ವಜ್ಞ, ಸಮಾಜ ಸುಧಾರಕ ಮತ್ತು ವಚನಕಾರರಾಗಿದ್ದರು. ಅವರು ಕೇವಲ ಒಬ್ಬ ವ್ಯಕ್ತಿಯಲ್ಲ, ಒಂದು ಮಹಾನ್​ ಚಿಂತನೆ. ಸಮಾಜದಲ್ಲಿದ್ದ ಜಾತಿ ವ್ಯವಸ್ಥೆ, ಅಸಮಾನತೆ ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತಿದರು. ಸಮಾನತೆ, ಪ್ರೀತಿ ಮತ್ತು ಸತ್ಯದ ಜೀವನವನ್ನು ಕಲಿಸಿದರು ಎಂದು ಜೆಎಸ್​ಎಸ್​ ಸಂಸ್ಥೆಯ ಡಾ. ಅಜಿತ ಪ್ರಸಾದ್​ ಹೇಳಿದರು.
ನಗರದ ವಿದ್ಯಾಗಿರಿಯ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಜೆಎಸ್​ಎಸ್​ ಐಟಿಐ ಕಾಲೇಜುಗಳ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಚಾರವೇ ಸ್ವರ್ಗ ಅನಾಚರವೇ ನರಕ ಎಂಬ ಅವರ ಮಾತು ಸರಿಯಾದ ಆಚಾರ ವಿಚಾರಗಳನ್ನು ಹೊಂದಿದ್ದರೆ ಜೀವನ ಸುಂದರವಾಗಿ ಇರುತ್ತದೆ. ಇಲ್ಲವಾದರೆ ಸಂಕಷ್ಟಗಳ ಸರಮಾಲೆಯಲ್ಲಿ ಜೀವನ ಮಾಡಬೇಕಾಗುತ್ತದೆ. ಬದುಕಲು ಯಾವುದೇ ಕೆಲಸ ಮಾಡಿದರೂ ತಪ್ಪಲ್ಲ, ಅದಕ್ಕೆ ಗೌರವ ಕೊಡಬೇಕು. ಎಲ್ಲ ಕೆಲಸಗಳಿಗೆ ಅದರದೇ ಆದ ಶ್ರೇಷ್ಠತೆ ಇದೆ. ಕೆಲಸದಲ್ಲೇ ನೆಮ್ಮದಿ ಪಡೆಯಬೇಕು ಎಂದರು.
ಡಾ. ಆರ್​.ವಿ. ಚಿಟಗುಪ್ಪಿ ಮಾತನಡಿ, 12ನೇ ಶತಮಾನದ ಮಹಾನ್​ ಸಮಾಜ ಸುಧಾರಕ, ತತ್ವಜ್ಞಾನಿ ಮತ್ತು ವಚನಕಾರ ಬಸವಣ ಸಾಮಾಜಿಕ ಸಮಾನತೆ, ಕಾಯಕ ಮತ್ತು ಭಕ್ತಿ ಮಾರ್ಗವನ್ನು ಬೋಧಿಸಿದ ಯುಗಪುರುಷ ಎಂದರು.