ಗರಗ ಕ್ಷೇತ್ರೀಯ ಸೇವಾ ಸಂಘದ `ಖಾದಿ ಕೇಂದ್ರದಲ್ಲಿ ರಾಷ್ಟ್ರ ಧ್ಬಜ ತಯಾರಿಸುತ್ತಿರುವುದು.
ಧಾರವಾಡ: ರಾಷ್ಟ್ರ ಧ್ವಜಕ್ಕೆ ಅಗತ್ಯವಿರುವ ಖಾದಿ ಬಟ್ಟೆ ತಯಾರಿಕೆಯಲ್ಲಿ ತೊಡಗಿದ್ದ ತಾಲೂಕಿನ ಗರಗ ಕ್ಷೇತ್ರೀಯ ಸೇವಾ ಸಂಘದ `ಖಾದಿ ಕೇಂದ್ರ'ದಲ್ಲಿ ಪ್ರಸ್ತುತ ಪ್ರಸ್ತುತ ರಾಷ್ಟ್ರ ಧ್ವಜವನ್ನೂ ತಯಾರು ಮಾಡಲಾಗುತ್ತಿದೆ. ಇಲ್ಲಿನ ಸಿಬ್ಬಂದಿಯೇ ಬಿಐಎಸ್ ಮಾರ್ಗಸೂಚಿಗಳ ಪ್ರಕಾರವೇ ಗುಣಮಟ್ಟದ ಖಾದಿ ಧ್ವಜ ತಯಾರಿಸುತ್ತಿದ್ದಾರೆ.
ಉತ್ಕೃಷ್ಟ ಬಟ್ಟೆ ತಯಾರಿಸುವುದನ್ನೇ ಧ್ಯೇಯವಾಗಿಸಿಕೊಂಡಿರುವ ಈ ಕೇಂದ್ರಕ್ಕೆ 1974ರಲ್ಲಿ ರಾಷ್ಟ್ರ ಧ್ವಜ ಬಟ್ಟೆ ನೇಯುವ ಅವಕಾಶ ಸಿಕ್ಕಿತು. ಉತ್ತರ ಭಾರತದ ಜನ ಇಲ್ಲಿಗೆ ಬಂದು ಬಟ್ಟೆ ಖರೀದಿಸುತ್ತಿದ್ದರು. ತಮೀಳುನಾಡು, ಮಹಾರಾಷ್ಟ್ರದಲ್ಲಿ ಖಾದಿ ಕೇಂದ್ರಗಳು ಕಾರಣಾಂತರಗಳಿಂದ ಬಂದ್ ಆದಾಗ, ಗರಗ ಕೇಂದ್ರ ಉತ್ತುಂಗದ ಸ್ಥಿತಿಯಲ್ಲಿತ್ತು. ಅಲ್ಲಿಂದ ಈವರೆಗೆ ಗುಣಮಟ್ಟದ ಬಟ್ಟೆ ತಯಾರಿಕೆಯಲ್ಲಿ ತೊಡಗಿದ್ದು, ಒಂದು ಬಾರಿನೂ ಬಟ್ಟೆ ತಿರಸ್ಕಾರ ಆಗಿಲ್ಲ.
ರಾಷ್ಟ್ರಧ್ವಜ ತಯಾರಿಕೆ ಅನುಮತಿ:
ಕೇಂದ್ರದಲ್ಲಿ ಮುಂಚೆರಾಷ್ಟ್ರ ಧ್ವಜದ ಬಟ್ಟೆ ಮಾತ್ರ ತಯಾರಿಸಲಾಗುತ್ತಿತ್ತು. 2023ರ ಜೂ.3ರಂದು ಬ್ಯೂರೋ ಆ-ï ಇಂಡಿಯನ್ ಸ್ಟಾಂಡರ್ಡ್ಸ್ (ಬಿಐಎಸ್) 2/3 ಅಡಿ ತ್ರಿವರ್ಣ ಧ್ವಜ ತಯಾರಿಕೆಗೆ ಅನುಮತಿ ನೀಡಿದೆ. ಇದರಿಂದಾಗಿ ಗರಗ ಕೇಂದ್ರದಲ್ಲಿಯೇ ನೂಲುವುದು, ನೇಯುವುದು, ಬಟ್ಟೆ ತಯಾರಿಕೆ ಜತೆಗೆ ಬಣ್ಣಗಳ ಮುದ್ರಣ ಮಾಡುವ ಕಾರ್ಯದೊಂದಿಗೆ ಕೇಂದ್ರದಲ್ಲೇ ಸಂಪೂರ್ಣ ತಿರಂಗಾ ಧ್ವಜ ರೂಪುಗೊಂಡಿವೆ.
1956ರಲ್ಲಿ ಧಾರವಾಡ ತಾಲೂಕು ಸೇವಾ ಸಂಘವೆAದು ಆರಂಭವಾಗಿತ್ತು. ಅಂದಿನಿAದಲೇ ರಾಷ್ಟ್ರ ಧ್ವಜಕ್ಕೆ ಬೇಕಾದ ಬಟ್ಟೆ ನೇಯ್ದುಕೊಡುವ ಅಽಕೃತ ಸಂಸ್ಥೆಯ ಮÁನ್ಯತೆ ಪಡೆದುಕೊಂಡಿತ್ತು. ರಾಷ್ಟç ಧ್ವಜ ತಯಾರಿಸಲು ಅಽಕೃತ ಅನುಮತಿ ಲಭಿಸಿರಲಿಲ್ಲ. ಇಲ್ಲಿ ಬಟ್ಟೆ ತಯಾರಿಸಿ ಮುಂಬೈನಲ್ಲಿರುವ ಖಾದಿ ಸಂಘಕ್ಕೆ ರವಾನಿಸಲಾಗುತ್ತಿತ್ತು. ಅಲ್ಲಿ ತ್ರಿವರ್ಣ ಧ್ವಜ ತಯಾರಾಗಿ, ಅಲ್ಲಿಂದ ರಾಷ್ಟçದ ವಿವಿಧ ಕಡೆಗಳಿಗೆ ರವಾನೆಯಾಗುತ್ತಿತ್ತು. ಪ್ರಸ್ತುತ ಸ್ವತಂತ್ರವಾಗಿ ರಾಷ್ಟçಧ್ವಜ ತಯಾರಿಸಬೇಕು ಎನ್ನುವ ಕೇಂದ್ರದ ಬಹುದಿನಗಳ ಬೇಡಿಕೆಯೂ ಈಡೇರಿದೆ. ಇಲ್ಲಿಯೇ ಈಗ ಬಟ್ಟೆಗೆ ಬಣ್ಣ ಹಾಕುವುದಷ್ಟೇ ಅಲ್ಲ. ಇಲ್ಲಿಯೇ ಧ್ವಜ ತಯಾರಿಸಿ ಬೇಡಿಕೆಗೆ ಅನುಗುಣವಾಗಿ ರವಾನೆ ಮಾಡಲಾಗುತ್ತಿದೆ.
ಕೇಂದ್ರದ ಗುಣಮಟ್ಟದ ಖಾದಿ ಬಟ್ಟೆ ತಯಾರಿಕೆ, ವಿಶಿಷ್ಟ ಕಾರ್ಯ ನೋಡಿ 2023ರ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರ 5 ಲಕ್ಷ ರೂ. ನಗದು ಸಹಿತ `ಗಾಂಽ ಸೇವಾ ಪ್ರಶಸ್ತಿ' ನೀಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನಿಂದಲೂ ಉತ್ತಮ ಸೇವಾ ಪ್ರಶಸ್ತಿ ಲಭಿಸಿದೆ. ಭವಿಷ್ಯದಲ್ಲಿ ಖಾದಿ ಕ್ಷೇತ್ರದಲ್ಲಿ ವಿಫುಲ ಉದ್ಯೋಗಾವಕಾಶ ನೀಡುವ ಉದ್ದೇಶ ಹೊಂದಿದೆ.
ಈ `ಖಾದಿ ಕೇಂದ್ರವು' ಕೇವಲ ಖಾದಿ ಬಟ್ಟೆ ಸಿದ್ಧಗೊಳಿಸುವುದಕ್ಕೆ ಸೀಮಿತವಾಗದೇ ಜನರಿಗೆ ತರಬೇತಿ ನೀಡಿ, ಉದ್ಯೋಗ ನೀಡುವ ವಿಶಿಷ್ಟ ಕಾರ್ಯದಲ್ಲಿ ತೊಡಗಿದೆ. ಸದ್ಯ ಕೇಂದ್ರದಲ್ಲಿ 220ಕ್ಕೂ ಅಽಕ ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕೇಂದ್ರಕ್ಕೆ ಕೆಲಸ ಕೇಳಿಕೊಂಡು ಬಂದವರಿಗೆ ಒಂದು ತಿಂಗಳ ತರಬೇತಿ ನೀಡಿ, ಉದ್ಯೋಗ ಕಲ್ಪಿಸಲಾಗುತ್ತಿದೆ. ಖಾದಿ ಬಟ್ಟೆಗಳ ತಯಾರಿಕೆಗೆ ನೇಕಾರರು ಸೂಕ್ತ. ಆದರೆ, ಈ ಕೇಂದ್ರದಲ್ಲಿ ಎಲ್ಲ ವರ್ಗದ ಜನರೂ ಖಾದಿ ಬಟ್ಟೆ ತಯಾರಿಸುವುದರಲ್ಲಿ ತೊಡಗಿರುವುದು ವಿಶೇಷ.