iskon temple ರಾಯಾಪುರ ಬಳಿಯ ಇಸ್ಕಾನ್ ಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಇಸ್ಕಾನ್ ಸಾಂಸ್ಕೃತಿಕ ಉತ್ಸವದಲ್ಲಿ ಮಕ್ಕಳು ನೃತ್ಯ ಪ್ರದರ್ಶಿಸಿ ಗಮನ ಸೆಳೆದರು. 
ಧಾರವಾಡ

iskon temple ಇಸ್ಕಾನ್ ಮಂದಿರದಲ್ಲಿ ಮಕ್ಕಳ ಕಲರವ

ಹುಬ್ಬಳ್ಳಿ: ಸಮೀಪದ ರಾಯಾಪುರ ಬಳಿಯ ಇಸ್ಕಾನ್ ಮಂದಿರದಲ್ಲಿ

iskon temple

ಇಸ್ಕಾನ್ ಸಾಂಸ್ಕೃತಿಕ ಉತ್ಸವ ನಿಮಿತ್ತ ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳಿಗಾಗಿ ಬುಧವಾರ ಬಣ್ಣ ತುಂಬುವ ಸ್ಪರ್ಧೆ ಏರ್ಪಡಿಸಲಾಗಿತ್ತು.

ಇಸ್ಕಾನ್ ಹು-ಧಾ ಅಧ್ಯಕ್ಷ ರಾಜೀವಲೋಚನದಾಸ ನೇತೃತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
400ಕ್ಕೂ ಹೆಚ್ಚು ಪುಟಾಣಿ ಸ್ಪರ್ಧಿಗಳು ಶ್ರೀಕೃಷ್ಣನ ಚಿತ್ರಗಳಿಗೆ ಮನಮೋಹಕವಾಗಿ ಬಣ್ಣ ತುಂಬಿದರು. ಭಾಗವಹಿಸಿದ ಪ್ರತಿ ಮಗುವಿಗೂ ಪ್ರಮಾಣಪತ್ರ ನೀಡಲಾಯಿತು. ವಿಜೇತರಿಗೆ ಪದಕ ಹಾಗೂ ಸ್ಮರಣಿಕೆಗಳನ್ನು ನೀಡಲು ನಿರ್ಧರಿಸಲಾಯಿತು.
3ರಿಂದ 6ನೇ ತರಗತಿ ಮಕ್ಕಳಿಗಾಗಿ ಭಾವಗೀತೆಗಳ ಸಮೂಹ ಗಾಯನ ಸ್ಪರ್ಧೆ ಆಯೋಜಿಸಿದ್ದು, 280 ವಿದ್ಯಾರ್ಥಿಗಳು ಭಾಗವಹಿಸಿದ್ದರು. 7ರಿಂದ 10ನೇ ತರಗತಿಯ 150 ವಿದ್ಯಾರ್ಥಿಗಳು ಶಾಸ್ತ್ರೀಯ ನೃತ್ಯ ಪ್ರದರ್ಶಿಸಿದರು. ಎಲ್‌ಕೆಜಿಯಿಂದ ನಾಲ್ಕನೇ ತರಗತಿಯ 200 ವಿದ್ಯಾರ್ಥಿಗಳಿಗೆ ಪುರಾಣಾಧಾರಿತ ನಾಟಕ ಸ್ಪರ್ಧೆ ಆಯೋಜಿಸಲಾಗಿತ್ತು. 5ರಿಂದ 7ನೇ ತರಗತಿಯ 180ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವೇದಿಕ ಪ್ರಶ್ನೋತ್ತರ ಸ್ಪರ್ಧೆ, 8ರಿಂದ 10ನೇ ತರಗತಿಯ 484 ವಿದ್ಯಾರ್ಥಿಗಳಿಗೆ ಸುಂದರ ಕೈಬರಹ ಸ್ಪರ್ಧೆ ಜರುಗಿತು.