ರ್ಪೂಣಿಮಾ ಹಾದಿಮನಿ 
ಧಾರವಾಡ

ಗಾಯಾಳು ಮಹಿಳೆ ಸಾವು

ಧಾರವಾಡ: ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಪೆಟ್ರೋಲ್​ಗೆ ಬೆಂಕಿ ತಗುಲಿ ಗಾಯಗೊಂಡಿದ್ದ ತಾಲೂಕಿನ ತಡಕೋಡ ಗ್ರಾಮದ ರ್ಪೂಣಿಮಾ ಹಾದಿಮನಿ (37) ಎಂಬುವರು ಚಿಕಿತ್ಸೆಗೆ ಸ್ಪಂದಿಸದೆ ಹುಬ್ಬಳ್ಳಿಯ ಕೆಎಂಸಿಆರ್​ಐ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾಳೆ.
ಜಿಲ್ಲೆಯಲ್ಲಿ ಪೆಟ್ರೋಲ್​ ಅಭಾವ ಇದೆ ಎಂಬ ವದಂತಿ ಹಿನ್ನೆಲೆ ರ್ಪೂಣಿಮಾ ಅವರ ಮನೆಯಲ್ಲಿ ಪೆಟ್ರೋಲ್​ ಸಂಗ್ರಹ ಮಾಡಿ ಇಡಲಾಗಿತ್ತು. ಮಾ. 30ರ ರಾತ್ರಿ ಪೆಟ್ರೋಲ್​ ಕ್ಯಾನ್​ಗೆ ಆಕಸ್ಮಿಕ ಬೆಂಕಿ ತಗುಲಿ ಇಡೀ ಬೆಂಕಿ ಮನೆಗೆ ಆವರಿಸಿತ್ತು. ಈ ವೇಳೆ ಮನೆಯಲ್ಲಿದ್ದ ರ್ಪೂಣಿಮಾ ಬೆಂಕಿಗೆ ಸಿಲುಕಿ ತೀವ್ರ ಗಾಯಗೊಂಡಿದ್ದರು. ಹುಬ್ಬಳ್ಳಿಯ ಕೆಎಂಸಿಆರ್​ಐ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಈ ಕುರಿತು ಗರಗ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.