ಧಾರವಾಡ ಪ್ರತ್ಯೇಕ ಪಾಲಿಕೆಗಾಗಿ ಹೋರಾಟ ಸಂಬಂಧ ಕರ್ನಾಟಕ ವಿದ್ಯಾವರ್ಧಕ ಸಂದಲ್ಲಿ ಸೋಮವಾರ ಜರುಗಿದ ಚರ್ಚಾ ಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ಮುಖಂಡರ ಮಧ್ಯೆ ಚಕಮಕಿ ನಡೆಯಿತು.
ಧಾರವಾಡ: ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಗಾಗಿ ಪ್ರತ್ಯೇಕ ಮಹಾನಗರ ಹೋರಾಟ ವೇದಿಕೆ ನೇತೃತ್ವದಲ್ಲಿ 25 ದಿನಗಳಿಂದ ನಡೆಯುತ್ತಿದ್ದ ಅನಿದಿರ್ಷ್ಟಾವಧಿ ಧರಣಿ ಸತ್ಯಾಗ್ರಹ ಸೋಮವಾರ ತಾತ್ಕಾಲಿಕವಾಗಿ ಮೊಟಕುಗೊಂಡಿದೆ. ಹಿರಿಯ ಹೋರಾಟಗಾರ ಬಿ.ಡಿ. ಹಿರೇಮಠ ಅವರು ಸರ್ಕಾರಕ್ಕೆ ಜುಲೈ 8ರ ಅಂತಿಮ ಗಡುವು ನೀಡಿ ಧರಣಿಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂದ ಸಭಾಂಗಣದಲ್ಲಿ ಪಾತೀತ ಹೋರಾಟ ಸಮಿತಿಯವರು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಪ್ರತಿನಿಧಿಗಳು ಹಾಗೂ ಹೋರಾಟ ಬೆಂಬಲಿತ ವಿವಿಧ ಸಂ& ಸಂಸ್ಥೆಗಳ ಪದಾಧಿಕಾರಿಗಳ ಚರ್ಚಾ ಸಭೆ ಜರುಗಿತು. ಕಾಂಗ್ರೆಸ್& ಬಿಜೆಪಿ ಮುಖಂಡರ ಮಧ್ಯೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಜು. 8ರೊಳಗೆ ಪ್ರತ್ಯೇಕ ಮಹಾನಗರ ಪಾಲಿಕೆಗೆ ಸಂಬಂಧಿಸಿ ನಿರ್ಣಯ ಕೈಗೊಳ್ಳದಿದ್ದರೆ ಜು. 9ರಿಂದ ಉಗ್ರ ಹೋರಾಟ ನಡೆಸುವುದಾಗಿ ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿಯಿಂದ ಎಚ್ಚರಿಕೆ ನೀಡಲಾಯಿತು.
* ಹೋರಾಟ ತಾತ್ಕಾಲಿಕ ಸ್ಥಗಿತ:
ಬಿ.ಡಿ. ಹಿರೇಮಠ ಮಾತನಾಡಿ, ಮುಖ್ಯಮಂತ್ರಿ ಮತ್ತು ಮಂತ್ರಿಮಂಡಲ ಹೊಸದಾಗಿ ರಚನೆಯಾಗಿದ್ದರಿಂದ ಸರ್ಕಾರದ ಮಟ್ಟದ ಕೆಲಸಗಳಿಗೆ ಕಾಲಾವಕಾಶ ಬೇಕು. ಹೀಗಾಗಿ ಸರ್ಕಾರಕ್ಕೆ 1 ತಿಂಗಳು ಗಡುವು ನೀಡಿ ಹೋರಾಟ ಕೈ ಬಿಟ್ಟಿದ್ದೇವೆ. ನಮ್ಮ ಕೆಲಸ ಆಗದಿದ್ದರೆ ಜು. 9ರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಮತ್ತು ಉಗ್ರ ಹೋರಾಟ ಒಟ್ಟಿಗೇ ನಡೆಯಲಿದೆ ಎಂದು ಎಚ್ಚರಿಸಿದರು.
ಪ್ರತ್ಯೇಕ ಪಾಲಿಕೆ ಹೊರಾಟ ಸಮಿತಿ ಹೋರಾಟ ಮುಂದುವರಿಸುವುದು ಅಥವಾ ಸ್ಥಗಿತಗೊಳಿಸುವ ಕುರಿತು ಚರ್ಚಾಸಭೆ ಕರೆದಿತ್ತು. ಕಾಂಗ್ರೆಸ್ ಮುಖಂಡರಾದ ಶಿವಶಂಕರ ಹಂಪಣ್ಣವರ, ನಾಗರಾಜ ಗೌರಿ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಸರ್ಕಾರ ಈಗಷ್ಟೇ ರಚನೆಯಾಗಿದೆ. ಹೋರಾಟದ ಬಗ್ಗೆ ಅರಿವಿರುವ ಕಾರಣ ಮುಖ್ಯಮಂತ್ರಿಗಳ ಕಚೇರಿಯಿಂದ ಸಮಯಾವಕಾಶ ಕೋರಿ ಬಿ.ಡಿ. ಹಿರೇಮಠರಿಗೆ ಪತ್ರ ಬರೆಯಲಾಗಿದೆ. ಹೀಗಾಗಿ ಹೋರಾಟ ಸ್ಥಗಿತಗೊಳಿಸಿ, 2 ತಿಂಗಳ ಗಡುವು ನೀಡುವುದು ಸೂಕ್ತ ಎಂದರು.
ಮಧ್ಯಪ್ರವೇಶಿಸಿದ ಪಾಲಿಕೆ ಬಿಜೆಪಿ ಸದಸ್ಯ ಶಿವು ಹಿರೇಮಠ ಮಾತನಾಡಿ, ರಾಜ್ಯಪಾಲರಿಂದ ಅನುಮೋದನೆಯಾದ 48 ಗಂಟೆಯಲ್ಲಿ ಪ್ರತ್ಯೇಕ ಪಾಲಿಕೆಗೆ ಅಂಕಿತ ಹಾಕಿಸುತ್ತೇವೆ ಎಂದು ಕಾಂಗ್ರೆಸ್ಸಿಗರು ಹೇಳಿದ್ದರು. 2 ತಿಂಗಳು ಸಮಯ ಕೇಳದೆ 15 ದಿನಗಳಲ್ಲಿ ಪ್ರತ್ಯೇಕ ಪಾಲಿಕೆ ರಚಿಸುವಂತೆ ಗುಡುವು ನೀಡಬೇಕು ಎಂದರು.
ಹಿರಿಯ ವಕೀಲ ಸಿ.ಎಸ್. ನೇಗಿನಹಾಳ ಮಾತನಾಡಿ, ಪಕ್ಷಗಳ ಕಚ್ಚಾಟ ಬೇಡ. ಮೂಲ ಹೋರಾಟಗಾರರು ಗುಡುವು ನೀಡುತ್ತೇವೆ. ಇಲ್ಲಿ ಯಾರೂ ರಾಜಕೀಯ ತರಬೇಡಿ ಎಂದು ಮನವಿ ಮಾಡಿದರು.
ಈ ವೇಳೆ ಮಾತಿನ ಚಕಮಕಿ ನಡೆದು ಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ಮಧ್ಯ ಪ್ರವೇಶಿಸಿದ ಬಿ.ಡಿ. ಹಿರೇಮಠ, ಇದು ಪಕ್ಷಾತಿತರ ಸಭೆ. ಇಲ್ಲಿ ಪಕ್ಷಗಳ ಸಾಧನೆಯ ಚರ್ಚೆ ಬೇಡ ಎಂದು ಎಲ್ಲರನ್ನು ಶಾಂತಗೊಳಿಸಿದರು. ಸಭೆಯನ್ನು ಹೋರಾಟದ ವೇದಿಕೆಗೆ ಸ್ಥಳಾಂತರಿಸಿದರು. ಅಲ್ಲಿ ನಿರ್ಣಯ ಕೈಗೊಂಡು ಜು. 8ರವರೆಗೆ ಸರ್ಕಾರಕ್ಕೆ ಕಾಲಾವಕಾಶ ನೀಡಿ, ಅಲ್ಲಿಯವರೆಗೆ ಹೋರಾಟ ಸ್ಥಗಿತಗೊಳಿಸುವುದಾಗಿ ಘೋಷಿಸಿದರು.
ಹೋರಾಟಗಾರರಾದ ಮಹಾದೇವ ಹೊರಟ್ಟಿ, ವಿಠ್ಠಲ ಕಮ್ಮಾರ, ಮನೋಜ ಪಾಟೀಲ, ಗುರುರಾಜ ಹುಣಸಿಮರದ, ರವಿ ಮಾಳಗೇರ, ಮನೋಜ ಕರ್ಜಗಿ, ದಾನಪ್ಪ ಕಬ್ಬೇರ ಹಾಗೂ ವಿವಿಧ ಸಂಘ& ಸಂಸ್ಥೆಗಳ ಮುಖಂಡರು ಪಾಲ್ಗೊಂಡಿದ್ದರು.
ಮೇಯರ್ ಜ್ಯೊತಿ ಪಾಟೀಲ, ಪಾಲಿಕೆ ಸದಸ್ಯರಾದ, ರಾಜು ಕಮತಿ, ಶಂಕರ ಶೆಳಕೆ, ಕವಿತಾ ಕಬ್ಬೇರ, ದೀಪಾ ನೀರಲಕಟ್ಟಿ, ಸುರೇಶ ಬೇದರೆ, ವಿಷ್ಣುತಿರ್ಥ ಕೊರ್ಲಹಳ್ಳಿ ಹಾಗೂ ಮುಖಂಡರು ಹಾಜರಿದ್ದರು.