ಭಾರತದ ಕೃಷಿ ಬಿಕ್ಕಟ್ಟುಗಳು ವಿಶೇಷ ಉಪನ್ಯಾಸ ಮಾಲಿಕೆ ಉದ್ಘಾಟನೆ 
ಧಾರವಾಡ

ಭಾರತದ ಕೃಷಿ ಬಿಕ್ಕಟ್ಟುಗಳು ವಿಶೇಷ ಉಪನ್ಯಾಸ ಮಾಲಿಕೆ ಉದ್ಘಾಟನೆ

ಧಾರವಾಡ: ಭಾರತ ದೇಶದ ಬೆನ್ನೆಲುಬು ರೈತ. ಆಹಾರ ಉತ್ಪಾದನೆಯಲ್ಲಿ ರೈತರ ಕೊಡುಗೆ ಅಪಾರ. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕು. ಇಲ್ಲದಿದ್ದರೆ ಬಹುಪಾಲು ರೈತರು ಕೃಷಿಯಿಂದ ವಿಮುಖವಾಗುವ ಆತಂಕವಿದೆ ಎಂದು ವಿಧಾನ ಸಭಾಧ್ಯಕ್ಷ ಡಾ. ಯು.ಟಿ ಖಾದರ U.T.Khadar ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಭಾರತದ ಕೃಷಿ ಬಿಕ್ಕಟ್ಟುಗಳು ವಿಶೇಷ ಉಪನ್ಯಾಸ ಮಾಲಿಕೆ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಸುಧಾರಿತ ಕೃಷಿಯಲ್ಲಿ ತೊಡಗಿ ದೇಶಕ್ಕೆ ಆಹಾರವನ್ನು ಪೂರೈಸುತ್ತಿರುವುದು ಶ್ಲಾಘನೀಯ. ಮತ್ತೊಂದೆಡೆ
ದೇಶದ ಜನಸಂಖ್ಯೆ ಹೆಚ್ಚಿದಂತೆ ಆಹಾರದ ಕೊರತೆಯಾಗುವ ಸವಾಲು ಕೃಷಿ ಕ್ಷೇತ್ರದ ಮುಂದಿದೆ. ಈ ದಿಶೆಯಲ್ಲಿ ರೈತರು ಸುಧಾರಿತ ಕೃಷಿಗೆ ಆದ್ಯತೆ ನೀಡಬೇಕು ಎಂದರು.
ಶಾಸಕ ಎನ್.ಎಚ್. ಕೋನರಡ್ಡಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಧಾರವಾಡ ವಾಲ್ಮಿಯ ವಿಶ್ರಾಂತ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಉಪನ್ಯಾಸ ನೀಡಿದರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು.
ಶಂಕರ ಹಲಗತ್ತಿ, ಬಸವಪ್ರಭು ಹೊಸಕೇರಿ, ಗುರು ಹಿರೇಮಠ, ಸತೀಶ ತುರಮರಿ, ವೀರಣ್ಣ ಒಡ್ಡೀನ, ಇತರರಿದ್ದರು.