ವಿವಿಧ ಬೇಡಿಕೆಗಾಗಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಂದ ಪ್ರತಿಭಟನೆ 
ಧಾರವಾಡ

ಕನಿಷ್ಠ ವೇತನ ಜಾರಿಗೊಳಿ, ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ರದ್ದುಗೊಳಿಸಿ

ಜಗದೀಶ ಹೊಂಬಳಿ
ಧಾರವಾಡ: ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರಿಗೆ ಕನಿಷ್ಠ ವೇತನ ಜಾರಿಗೊಳಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯ ಫೆಡರೇಶ್ (ಎಐಟಿಯುಸಿ) ಧಾರವಾಡ ಜಿಲ್ಲಾ ಘಟಕದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.
ಈಗಾಗಲೇ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಲಾಗಿದೆ. 4 ವರ್ಷ ಮೇಲ್ಪಟ್ಟಿರುವ ಮಕ್ಕಳನ್ನು ದಾಖಲು ಮಾಡಿಕೊಳ್ಳಲು ಸರ್ಕಾರ ಆದೇಶದಲ್ಲಿ ತಿಳಿಸಿದೆ. ಇದರಿಂದ ಹೆಚ್ಚಿನ ಮಕ್ಕಳು ದಾಖಲಾಗಿ, ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾತಿ ಕಡಿಮೆಯಾಗಿದೆ. ಅಂಗನವಾಡಿ ಕೇಂದ್ರಗಳು ಮುಚ್ಚುವಂತ ಪರಿಸ್ಥಿತಿ ಎದುರಾಗಿದೆ. ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ರದ್ದು ಮಾಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯ ಆಗ್ರಹಿಸಿದರು.
ಜಿಲ್ಲೆಯ ಅಂಗನವಾಡಿಗಳಿಗೆ ಪ್ರತಿ ವರ್ಷ 6ರಿಂದ 8 ಸಿಲಿಂಡರ್‌ಗಳನ್ನು ಸರಬುರಾಜು ಮಾಡಬೇಕು. ಜಿಲ್ಲೆಯ ಕೆಲ ತಾಲೂಕುಗಳಲ್ಲಿ 2018ರಿಂದ ಸಹಾಯಕಿಯರ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಬೇಕು. ಕಚೇರಿಯಿಂದ ಕಳಪೆ ಆಹಾರ ಧಾನ್ಯ ಸರಬುರಾಜು ಆಗುತ್ತಿದೆ. ಫಲಾನುಭವಿಗಳು ನಿರಾಕರಿಸುತ್ತಿದ್ದಾರೆ. ಗುಣಮಟ್ಟದ ಆಹಾರ ಸಾಮಗ್ರಿ ಪೂರೈಸಬೇಕು.
ಮಾತೃವಂದನ ಯೋಜನೆ ಪ್ರಾರಂಭವಾದಾಗಿನಿAದ ಈವರೆಗೂ 2 ಬಾರಿ ಮಾತ್ರ ಪ್ರೋತ್ಸಾಹ ಧನ ಪಾವತಿಸಲಾಗಿದೆ. ಬಾಕಿ ಪ್ರೋತ್ಸಾಹ ಧನ ಬೇಗನೆ ಪಾವತಿಸಬೇಕು. ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳ ಬಾಡಿಗೆಯನ್ನು ಪ್ರತಿ ತಿಂಗಳು ಕಾಲಕಾಲಕ್ಕೆ ಬಿಡುಗಡೆ ಮಾಡಬೇಕು. ಮೊಟ್ಟೆ ಹಣವನ್ನು ಸರಿಯಾದ ಸಮಯಕ್ಕೆ ಪಾವತಿಸಬೇಕು ಎಂದು ಒತ್ತಾಯಿಸಿದರು.
ಅನಾರೋಗ್ಯಕ್ಕೆ ತುತ್ತಾಗುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಶಸ್ತç ಚಿಕಿತ್ಸೆ ಸೇರಿ ಎಲ್ಲ ರೀತಿಯ ಚಿಕಿತ್ಸೆಗಾಗಿ ಉಚಿತ ವೈದ್ಯಕೀಯ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಬೇಕು. ಅನಾರೋಗ್ಯಕ್ಕೆ ಒಳಗಾದ ಅವಽಯನ್ನು ವೇತನ ಸಹಿತ ವೈದ್ಯಕೀಯ ರಜೆ ಎಂದು ಪರಿಗಣಿಸಬೇಕು. ಅಂಗನವಾಡಿ ಶಿಕ್ಷಕಿಯರನ್ನು ಮತ್ತು ಸಹಾಯಕಿಯರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಜಿಲ್ಲಾಽಕಾರಿ ಅವರಿಗೆ ಮನವಿ ಸಲ್ಲಿಸಿದರು.
ರತ್ನಾ ಶಿರೂರ, ಕಸ್ತೂರಿ ಬೇಂದ್ರೆ, ಚನ್ನಕ್ಕ ಅಂಗಡಿ, ಕಲಾವತಿ ಪಿರಗಣ್ಣವರ, ಶಿವಲೀಲಾ ನಡೂರಮಠ, ಬಸಮ್ಮ ಕಳಸದ, ಭಾರತಿ ಹಳೇಮನಿ, ಮಂಜುಳಾ ಯದ್ರಾವಿ, ಲತಾ ಘೋಡಕೆ, ನಾಗಮ್ಮ ಒಣರೊಟ್ಟಿ, ನಿರ್ಮಲಾ ಕುಲಕರ್ಣಿ ಇತರರಿದ್ದರು.