ಹುಬ್ಬಳ್ಳಿಯಲ್ಲಿ (ILYF Conclave) ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ ಅಧ್ಯಕ್ಷ ಗುರು ಅಂಗಡಿ ಮಾತನಾಡಿದರು. ಶರಣ ಪಾಟೀಲ, ನಾಗರಾಜ ಮಕಾವಿ, ಗಿರೀಶ ಮತ್ತಿಕೊಪ್ಪ ಇದ್ದರು. 
ಧಾರವಾಡ

ಲಿಂಗಾಯತ ಜಾಗತಿಕ (ILYF Conclave) ಉದ್ಯಮ ಸಮ್ಮೇಳನ 29ರಿಂದ

ಸಂತೋಷ ವೈದ್ಯ
ಹುಬ್ಬಳ್ಳಿ: ಬೆಂಗಳೂರಿನ (ILYF Conclave)ಪ್ಯಾಲೇಸ್ ಮೈದಾನದ ವೈಟ್ ಪೆಟಲ್ಸ್ನಲ್ಲಿ ಜ. 29ರಿಂದ ಫೆಬ್ರವರಿ 1ರವರೆಗೆ ವೀರಶೈವ ಲಿಂಗಾಯತ ಜಾಗತಿಕ ಉದ್ಯಮ ಸಮ್ಮೇಳನ ಆಯೋಜಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ ಅಧ್ಯಕ್ಷ ಗುರು ಅಂಗಡಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 29ರಂದು ಸಂಜೆ 4.30ಕ್ಕೆ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಉದ್ಘಾಟಿಸುವರು. ನಾಲ್ಕು ದಿನಗಳ ಸಮ್ಮೇಳನದಲ್ಲಿ ಸುಮಾರು 75 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕೈಗಾರಿಕೋದ್ಯಮಿಗಳು, ನಾಯಕರು, ನೀತಿ ನಿರ್ಧಾರಕರು, ನವೋದ್ಯಮಿಗಳು, ಸಣ್ಣ ಹಾಗೂ ಮಧ್ಯಮ ಕೈಗಾರಿಕೋದ್ಯಮಿಗಳು ಭಾಗವಹಿಸಲಿದ್ದಾರೆ. 260 ಮಳಿಗೆಗಳನ್ನು ತೆರೆಯಲಾಗುತ್ತಿದೆ ಎಂದು ವಿವರಿಸಿದರು.
2023ರಲ್ಲಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಮ್ಮೇಳನದಲ್ಲಿ 35 ಕೋಟಿ ರೂ., 2024ರಲ್ಲಿ ಹುಬ್ಬಳ್ಳಿಯಲ್ಲಿ 64 ಕೋಟಿ ರೂ. ಹಾಗೂ 2025ರಲ್ಲಿ ಮೈಸೂರಿನಲ್ಲಿ 124 ಕೋಟಿ ರೂ. ವ್ಯವಹಾರ ಒಡಂಬಡಿಕೆಗಳು ಆಗಿದ್ದವು. ಈ ಬಾರಿ ಉದ್ಯಮ ವೃದ್ಧಿಯಲ್ಲಿ ಹೊಸ ಮೈಲುಗಲ್ಲು ಸಾಧಿಸುವ ನಿರೀಕ್ಷೆ ಇದೆ ಎಂದರು.
ಫೆ. 1ರಂದು ಸಂಜೆ 4.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಚಿಕ್ಕಮಗಳೂರಿನ ಬಸವತತ್ವ ಪೀಠದ ಡಾ. ಬಸವ ಮರಳುಸಿದ್ಧ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಸಂಜೆ 6.30ಕ್ಕೆ ಮನರಂಜನಾ ಸಂಜೆ ಕಾರ್ಯಕ್ರಮದಲ್ಲಿ ಗಾಯಕರಾದ ಐಶ್ವರ್ಯ ರಂಗರಾಜನ್, ಸಾಧಿ್ವ ಕೊಪ್ಪ, ನಿಹಾಲ ಹಾಗೂ ಅಶ್ವಿನ್ ಶರ್ಮಾ ಪಾಲ್ಗೊಳ್ಳುವರು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಶರಣ ಪಾಟೀಲ, ಉಪಾಧ್ಯಕ್ಷ ನಾಗರಾಜ ಮಕಾವಿ, ಗಿರೀಶ ಮತ್ತಿಕೊಪ್ಪ ಇದ್ದರು.