illegal ration ದಾಳಿ ನಡೆಸಿದ ವಿದ್ಯಾನಗರ ಪೊಲೀಸರು 
ಧಾರವಾಡ

illegal ration ಅಕ್ರಮ ಪಡಿತರ ಸಾಗಿಸುತ್ತಿದ್ದವನ ಬಂಧನ

ಮರಿದೇವ ಹೂಗಾರ
ಹುಬ್ಬಳ್ಳಿ: ಇಲ್ಲಿಯ ಉಣಕಲ್ಲ ಗ್ರಾಮದ ಕೊಪ್ಪಳ ಲೇಔಟ್ ಹತ್ತಿರ ಪಡಿತರ ಅಕ್ಕಿ ಅಕ್ರಮವಾಗಿ illegal ration ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿದ ವಿದ್ಯಾನಗರ ಪೊಲೀಸರು, 5.05 ಲಕ್ಷ ರೂ. ಮೌಲ್ಯದ ಅಕ್ಕಿ ಚೀಲಗಳನ್ನು ವಶಕ್ಕೆ ಪಡೆದಿದ್ದಾರೆ.
ವಾಹನ ಚಾಲಕ ಮಲ್ಲಿಕಜಾನ್ ಎಂಬಾತನನ್ನು ಬಂಧಿಸಿದ್ದು, ಸದಾನಂದ ಕುರ್ಲಿ, ಇಮ್ರಾನ್, ನೂರ್ ಹಾಗೂ ವಾಹನ ಮಾಲೀಕರ ವಿರುದ್ಧ ದೂರು ದಾಖಲಾಗಿದೆ. ಪೊಲೀಸರು ತನಿಖೆ ನಡೆಸಿದ್ದಾರೆ.