ಅಮೋಘ ಆರ್. ಮತ್ತು ಸಿದ್ಧಾರ್ಥ ಸಿಂಗ್
ಧಾರವಾಡ: ಧಾರವಾಡ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) 7ನೇ ಘಟಿಕೋತ್ಸವ ಸಮಾರಂಭವನ್ನು ಜು. 18ರಂದು ಮಧ್ಯಾಹ್ನ 3ಕ್ಕೆ ಐಐಟಿಯ ಪ್ರೇಕ್ಷಾಗೃಹದಲ್ಲಿ ಆಯೋಜಿಸಲಾಗಿದೆ ಎಂದು ಐಐಟಿ ನಿರ್ದೇಶಕ ಪ್ರೊ. ವೆಂಕಪ್ಪಯ್ಯ ದೇಸಾಯಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೆಹಲಿ ಐಐಟಿ ಪ್ರಾಧ್ಯಾಪಕ ಡಾ. ಭೀಮ್ ಸಿಂಗ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಬೆಂಗಳೂರಿನ ಟಾಟಾ ಪವರ್ ರಿನೀವೆಬಲ್ ಮೈಕ್ರೋಗ್ರಿಡ್ ಸಿಇಒ ಮನೋಜ್ ಗುಪ್ತಾ ಹಾಗೂ ಭಾರತೀಯ ಪ್ಯಾನ್ ಐಐಟಿ ಪೂರ್ವ ಛಾತ್ರಗಣ ಅಧ್ಯಕ್ಷ ಪ್ರಭಾತ ಕುಮಾರ್ ಗೌರವ ಅತಿಥಿಗಳಾಗಿ ಭಾಗವಹಿಸುವರು. ಧಾರವಾಡ ಐಐಟಿಯ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶರದ್ಕುಮಾರ್ ಅಧ್ಯಕ್ಷತೆ ವಹಿಸುವರು ಎಂದರು.
ಘಟಿಕೋತ್ಸವದಲ್ಲಿ ಬಿ.ಟೆಕ್, ಬಿ.ಎಸ್., ಎಂ.ಟೆಕ್, ಎಂಎಸ್., ಪಿಎಚ್.ಡಿ, ಪಿಜಿ ಡಿಪ್ಲೋಮಾ ಸೇರಿ 313 ಪದವಿ ಪ್ರದಾನ ಮಾಡಲಾಗುವುದು. ಬಿ.ಟೆಕ್ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ವಿಭಾಗದ ಅಮೋ ಆರ್. "ರಾಷ್ಟ್ರಪತಿ ಚಿನ್ನದ ಪದಕ' ಮತ್ತು ಅದೇ ವಿಭಾಗದ ಸಿದ್ಧಾರ್ಥ ಸಿಂಗ್ಗೆ "ನಿರ್ದೇಶಕರ ಚಿನ್ನದ ಪದಕ ಪ್ರದಾನ ಮಾಡಲಾಗುವುದು ಎಂದರು.
ಧಾರವಾಡ ಐಐಟಿ ದಶಕದ ಸಂಭ್ರಮದಲ್ಲಿದ್ದು, ಘಟಿಕೋತ್ಸವದಲ್ಲಿ ಇದೇ ಮೊದಲ ಬಾರಿ ಪದ್ಮಭೂಷಣ ಸುಧಾ ಮೂತಿರ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಡಾ. ದೇಸಾಯಿ ತಿಳಿಸಿದರು.