ಡಾ. ಎಸ್.ಆರ್. ಮಹದೇವ ಪ್ರಸನ್ನ
ಧಾರವಾಡ: ಧಾರವಾಡದ ಭಾರತೀಯ ಮಾಹಿತಿ ವಿಜ್ಞಾನ ತಂತ್ರಜ್ಞಾನ ಸಂಸ್ಥೆಯ (ಐಐಐಟಿ) 8ನೇ ಘಟಿಕೋತ್ಸವವನ್ನು ಮೇ 30ರಂದು ಬೆಳಗ್ಗೆ 11ಕ್ಕೆ ಆಯೋಜಿಸಲಾಗಿದೆ ಎಂದು ನಿರ್ದೇಶಕ ಡಾ. ಎಸ್.ಆರ್. ಮಹದೇವ ಪ್ರಸನ್ನ ಹೇಳಿದರು.
ಐಐಐಟಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಐಟಿ ದೆಹಲಿ ನಿರ್ದೇಶಕ ಪ್ರೊ. ರಂಗನ್ ಬ್ಯಾನಜಿರ್ ಘಟಿಕೋತ್ಸವ ಭಾಷಣ ಮಾಡುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಧಾರವಾಡ ಐಐಐಟಿ ಆಡಳಿತ ಮಂಡಳಿ ಅಧ್ಯಕ್ಷ ಜಲಜ್ ದಾನಿ ಅಧ್ಯಕ್ಷತೆ ವಹಿಸುವರು ಎಂದರು.
ಘಟಿಕೋತ್ಸವದಲ್ಲಿ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ನಲ್ಲಿ 136, ಡಾಟಾ ಸೈನ್ಸ್ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ 66 ಹಾಗೂ ಇಲೆಕ್ಟ್ರಾನಿಕ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ 51, ಬಿ.ಟೆಕ್ ಹಾಗೂ ಎಂ.ಟೆಕ್ ಕೋಸ್ಗಳಲ್ಲಿ ಒಟ್ಟು 253 ವಿದ್ಯಾಥಿರ್ಗಳು ಪದವಿ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿಗಳ ಹೆಸರಿನ ಚಿನ್ನದ ಪದಕ, ಪ್ರತಿ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾಥಿರ್ಗಳಿಗೆ ನಿರ್ದೇಶಕರ ಹೆಸರಿನ 6 ಆರು ಪದಕಗಳನ್ನು ನೀಡಲಾಗುವುದು ಎಂದರು.
ಐಐಐಟಿ ಕುಲಸಚಿವ ಪ್ರೊ. ಸತೀಶ ಅಣ್ಣಿಗೇರಿ, ವಿದ್ಯಾಥಿರ್ ಕಲ್ಯಾಣಾಧಿಕಾರಿ ಪ್ರೊ. ಕೆ. ಗೋಪಿನಾಥ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ವಾಸುದೇವ ಪರ್ವತಿ ಸುದ್ದಿಗೋಷ್ಠಿಯಲ್ಲಿದ್ದರು.