ಹುಬ್ಬಳ್ಳಿಯಲ್ಲಿ ಭಾನುವಾರ (ICI HD) ಆಯೋಜಿಸಿದ್ದ ಇಂಡಿಯನ್ ಕಾಂಕ್ರೀಟ್ ಇನ್ಸ್ಟಿಟ್ಯೂಟ್ ಹುಬ್ಬಳ್ಳಿ-ಧಾರವಾಡ ಸೆಂಟರ್ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಡಾ. ವಿ. ರಾಮಚಂದ್ರ ಉದ್ಘಾಟಿಸಿದರು. ಡಾ. ಆನಂದ ಹುಣಶ್ಯಾಳ, ರಾಹುಲ ಕೋಟಿ, ಸುರೇಶ ಕಿರೇಸೂರ ಇದ್ದರು.
ಹುಬ್ಬಳ್ಳಿ: ನಿರ್ಮಾಣ (ICI HD) ಕಾರ್ಯದಲ್ಲಿ ಆಗುವ ಸಣ್ಣ ತಪ್ಪುಗಳು ದೊಡ್ಡ ಅನಾಹುತಗಳಿಗೆ ಕಾರಣವಾಗಬಹುದು. ಆದ್ದರಿಂದ ಇಂಜಿನಿಯರ್ಗಳು ನಿರ್ಮಾಣ ಕಾಮಗಾರಿಯಲ್ಲಿ ಸ್ಥಿರತೆ ಹಾಗೂ ಸುರಕ್ಷತೆಗೆ ಗಮನ ನೀಡಬೇಕು ಎಂದು ಇಂಡಿಯನ್ ಕಾಂಕ್ರೀಟ್ ಇನ್ಸ್ಟಿಟ್ಯೂಟ್ (ಐಸಿಐ) ರಾಷ್ಟ್ರೀಯ ಅಧ್ಯಕ್ಷ ಡಾ. ವಿ. ರಾಮಚಂದ್ರ ಹೇಳಿದರು.
ನಗರದಲ್ಲಿ ಭಾನುವಾರ ಆಯೋಜಿಸಿದ್ದ ಐಸಿಐ ಹುಬ್ಬಳ್ಳಿ-ಧಾರವಾಡ ಸೆಂಟರ್ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬೃಹತ್ ಕಟ್ಟಣ, ಹೆದ್ದಾರಿ, ಅಣೆಕಟ್ಟುಗಳ ನಿರ್ವಣದಲ್ಲಿ ಗುಣಮಟ್ಟ ಮತ್ತು ಭದ್ರತೆಗೆ ಮೊದಲ ಆದ್ಯತೆ ನೀಡಬೇಕು. ಖಡಿ, ಸಿಮೆಂಟ್ ಮಿಶ್ರಣ ಮಾಡುವಲ್ಲಿ ಹಾಗೂ ಸ್ಟೀಲ್ ಬಳಕೆ ಮಾಡುವಲ್ಲಿ ಎಚ್ಚರಿಕೆ ವಹಿಸುವುದು ಇಂಜಿನಿಯರ್ಗಳ ಆದ್ಯ ಕರ್ತವ್ಯವಾಗಿದೆ ಎಂದರು.
ಕೋಟಿ ಸ್ಟೀಲ್ನ ಮ್ಯಾನೇಜಿಂಗ್ ಪಾರ್ಟನರ್ ರಾಹುಲ ಕೋಟಿ, ನಮ್ಮ ಕಂಪನಿಯು ಗುಣಮಟ್ಟದ ಟಿಎಂಟಿ ಬಾರ್ಗಳನ್ನು ಉತ್ಪಾದಿಸುತ್ತಿದ್ದು ಈಗಾಗಲೇ ಉತ್ತರ ಕರ್ನಾಟಕ ಇಂಜಿನಿಯರ್ಗಳು ನಮ್ಮ ಉತ್ಪನ್ನಗಳ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದು ಹೇಳಿದರು.
ಐಸಿಐ ಹುಬ್ಬಳ್ಳಿ-ಧಾರವಾಡ ಸೆಂಟರ್ನ ಚೇರ್ಮನ್ ಆಗಿ ಸುರೇಶ ಕಿರೇಸೂರ, ಕಾರ್ಯದರ್ಶಿಯಾಗಿ ಡಾ. ಆನಂದ ಹುಣಶ್ಯಾಳ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿಜಯ ತೋಟಗೇರ, ಶ್ರೀಹರಿ ಕೆ.ಎಚ್., ಸುರೇಶ ಪಾಟೀಲ, ಡಾ. ಎಂ.ಆರ್. ಪಾಟೀಲ, ಜಿ.ಎಸ್. ಅಂಗಡಿ, ಉಮೇಶ ನೀಲಿ, ಸಂತೋಷ ಅಂಚಟಗೇರಿ ಹಾಗೂ ಡಾ. ರೂಪಾ ಎ.ಕೆ. ಅಧಿಕಾರ ಸ್ವೀಕರಿಸಿದರು.
ಡಾ.ಎನ್.ಎಸ್. ನಾಡಗೇರ ಕಾರ್ಯಕ್ರಮ ನಿರೂಪಿಸಿದರು.