ibmr utsav ಹುಬ್ಬಳ್ಳಿಯ ವಿದ್ಯಾನಗರ ಐಬಿಎಂಆರ್ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಐಸಿರಿ ಉತ್ಸವವನ್ನು ಕವಿವಿ ಕುಲಸಚಿವ ಡಾ. ಮೃತ್ಯುಂಜಯ ಅಗಡಿ ಉದ್ಘಾಟಿಸಿದರು. ವಿನಯಚಂದ್ರ ಮಹೇಂದ್ರಕರ, ಡಾ. ಎಚ್.ವಿ. ಬೆಳಗಲಿ, ಡಾ. ಇಗ್ನೇಶ್ ಸಕ್ರಿ, ಡಾ. ರೇಖಾ ಮಹೇಂದ್ರಕರ, ಅಣ್ಣಪ್ಪ ಕೊರವರ ಇತರರು ಇದ್ದರು.
- ಐಬಿಎಂಆರ್ ಐಸಿರಿ ಉತ್ಸವ ಉದ್ಘಾಟನೆ
- ಕಲಿಕೆಯೊಂದಿಗೆ ಉದ್ಯೋಗ ಕೌಶಲ ಬೆಳೆಸಿಕೊಳ್ಳಿ
- ಕವಿವಿ ಕುಲಸಚಿವ ಡಾ. ಮೃತ್ಯುಂಜಯ ಅಗಡಿ ಅಭಿಮತ
ಹುಬ್ಬಳ್ಳಿ: ibmr utsav ಶಿಕ್ಷಣ ಕ್ಷೇತ್ರದಲ್ಲಿ ದಶಕಗಳ ಅನುಭವ ಹೊಂದಿರುವ ಐಬಿಎಂಆರ್ ಸಮೂಹ ಸಂಸ್ಥೆಯು ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳಿಗೆ ಕಲಿಕೆಯೊಂದಿಗೆ ಉದ್ಯೋಗ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಕವಿವಿ ಕುಲಸಚಿವ ಡಾ. ಮೃತ್ಯುಂಜಯ ಅಗಡಿ ಅಭಿಪ್ರಾಯಪಟ್ಟರು.
ಇಲ್ಲಿಯ ವಿದ್ಯಾನಗರ ಅಕ್ಷಯ ಕಾಲನಿಯಲ್ಲಿರುವ ಐಬಿಎಂಆರ್ ಕ್ಯಾಂಪಸ್ನಲ್ಲಿ ಗುರುವಾರ ಏರ್ಪಡಿಸಿದ್ದ ಐಸಿರಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡುವುದು ಅವಶ್ಯಕ. ಹಿಂದೂಸ್ತಾನಿ ಸಂಗೀತದ ವಿವಿಧ ಆಯಾಮಗಳನ್ನು ಸಹ ಕಲಿಸಬೇಕು. ವಚನ, ದಾಸರ ಪದಗಳನ್ನು ಹಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಇಲ್ಲಿನ ವಿದ್ಯಾರ್ಥಿಗಳು ಇಂತಹ ಹಲವು ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಶ್ಲಾಘನೀಯ ಎಂದರು.
ಕಾನೂನು ವಿವಿ ಸಿಂಡಿಕೇಟ್ ಸದಸ್ಯ ಡಾ. ಎಚ್.ವಿ. ಬೆಳಗಲಿ ಮಾತನಾಡಿ, ಇಂದಿನ ಮಕ್ಕಳಿಗೆ ಸೃಜನಾತ್ಮಕ ಚಟುವಟಿಕೆಗಳ ಮೂಲಕ ಕಲಿಕೆ ಅಗತ್ಯ. ಇದನ್ನು ಐಬಿಎಂಆರ್ ಸಾಂಸತಿಕ ವೈಭವದ ಮೂಲಕ ಪರಿಚಯಿಸುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಐಬಿಎಂಆರ್ ಚೇರ್ಮನ್ ವಿನಯಚಂದ್ರ ಮಹೇಂದ್ರಕರ, ಐಸಿರಿ ಎರಡನೇ ಉತ್ಸವ ಆಚರಿಸುತ್ತಿದ್ದೇವೆ. ಇದು ವಿದ್ಯಾರ್ಥಿಗಳಲ್ಲಿ ಹೊಸ ಅಲೆಗಳನ್ನು ಸೃಷ್ಟಿಸಿ ಸಾಧನೆಯ ಹಾದಿ ಸುಗಮಗೊಳಿಸುತ್ತದೆ. ಸಂಸ್ಥೆಯ ಎಲ್ಲ ವಿಭಾಗಗಳು ಇದರಲ್ಲಿ ಭಾಗಿಯಾಗಿರುವುದು ವಿಶೇಷ ಎಂದರು.
ಟ್ರಸ್ಟಿ ಸುಮಾ ಮಹೇಂದ್ರಕರ, ಸಿಇಒ ಡಾ. ಇಗ್ನೇಶ ಸಕ್ರಿ, ಡಾ. ರೇಖಾ ಮಹೇಂದ್ರಕರ, ಡಾ. ಅರುಣ ಶೆಟ್ಟಿ, ಡಾ. ಎಸ್.ವಿ. ಸೋಗಿ, ಬಿಂದು ಎಸ್., ಸಂತೋಷ ಬಿ., ರೋಹನ್ ಕುಲಕರ್ಣಿ, ಸುಮಂತ ಬಿ., ಇತರರು ಪಾಲ್ಗೊಂಡಿದ್ದರು.
ಪ್ರಿಯಾ ಲಮಾಣಿ ಪ್ರಾರ್ಥನೆ ಹಾಡಿದರು. ಡಾ. ಶಂಕರ ಚಕ್ರವರ್ತಿ ಅತಿಥಿಗಳನ್ನು ಪರಿಚಯಿಸಿದರು. ಅಣ್ಣಪ್ಪ ಕೊರವರ ಸ್ವಾಗತಿಸಿದರು. ದೀಪಾ ಸುರೇಬಾನ್ ಕಾರ್ಯಕ್ರಮ ನಿರೂಪಿಸಿದರು. ನಜೀಮ್ ವಂದಿಸಿದರು.