ibmr teachers ಹುಬ್ಬಳ್ಳಿಯ ಐಬಿಎಂಆರ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಾಧ್ಯಾಪಕರು, ವಿದ್ಯಾರ್ಥಿಗಳು.
ಹುಬ್ಬಳ್ಳಿ: ibmr teachers ಇಲ್ಲಿಯ ವಿದ್ಯಾನಗರ ಐಬಿಎಂಆರ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಅರ್ಥಪೂರ್ಣಗೊಳಿಸಲಾಯಿತು.
ಸರ್ವೆಪಲ್ಲಿ ಡಾ. ಎಸ್. ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಗೌರವ ನಮನ ಸಲ್ಲಿಸಿದರು.
ವಿದ್ಯಾರ್ಥಿಗಳು ಪ್ರಾಧ್ಯಾಪಕರಿಗಾಗಿ ಹಲವು ವಿಶೇಷ ಆಟಗಳನ್ನು ಏರ್ಪಡಿಸಿ ಸಂಭ್ರಮದಿಂದ ಪಾಲ್ಗೊಳ್ಳುವಂತೆ ಮಾಡಿದರು.
ಪ್ರಾಧ್ಯಾಪಕರು ಸಹ ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಅನಾವರಣ ಮಾಡಿದರು. ಶಫಾ ಚೌಧರಿ, ರಾಘವೇಂದ್ರ ವಾಡಕರ ನಿರ್ವಹಿಸಿದರು. ರಾಯೆಸಾಬ ಕಮಡೊಳ್ಳಿ ಹಾಡು ಪ್ರಸ್ತುತಪಡಿಸಿದರು.
ಪ್ರಶಿಕ್ಷಣಾರ್ಥಿಗಳಾದ ತಹಸೀನ್ ಮುಲ್ಲಾ, ಕಾರ್ತಿಕ ಜಾಲಿಕಟ್ಟಿ, ವತ್ಸಲಾ, ಈರೇಶ, ಚೇತನ ಮೇಟಿ, ಸ್ವಾತಿ ಅನಿಸಿಕೆ ವ್ಯಕ್ತಪಡಿಸಿದರು.
ಶಿವಾನಿ ಮಲ್ಲಿಗವಾಡ, ವಿಠ್ಠಲ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಅರ್ಪಿತಾ ಹೂಗಾರ, ತುಳಸಾ, ರಂಜಿತಾ ಪ್ರಾರ್ಥನೆ ಹಾಡಿದರು. ಸವಿತಾ ಸ್ವಾಗತಿಸಿದರು. ಜೆರಮಿ ಕನವಳ್ಳಿ ವಂದಿಸಿದರು.