ibmr celebration ಹುಬ್ಬಳ್ಳಿಯ ಐಬಿಎಂಆರ್ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನೌಕಾದಳ ನಿವೃತ್ತ ಅಧಿಕಾರಿ ವಿರುಪಾಕ್ಷಪ್ಪ ಅವರನ್ನು ಸನ್ಮಾನಿಸಲಾಯಿತು. 
ಧಾರವಾಡ

IBMR celebration ಐಬಿಎಂಆರ್ ನಲ್ಲಿ ಸಂಭ್ರಮದ ಗಣರಾಜ್ಯೋತ್ಸವ

ಪ್ರಮುಖ ಮುಖ್ಯಾಂಶಗಳು

  • ಬಲಿಷ್ಠ ದೇಶಕ್ಕಾಗಿ ಯುವಕರ ಶ್ರಮ ಅಗತ್ಯ
  • ನಿವೃತ್ತ ನೌಕಾದಳ ಅಧಿಕಾರಿ ವಿರುಪಾಕ್ಷಪ್ಪ ಅಭಿಮತ
ಹುಬ್ಬಳ್ಳಿ: IBMR celebration ರಾಷ್ಟ್ರವು ಬಲಿಷ್ಠವಾಗಬೇಕಾದರೆ ಯುವಕರಿಗೆ ಸೂಕ್ತ ಮಾರ್ಗದರ್ಶನ ಬೇಕಾಗಿದೆ. ಹಿರಿಯರ ಸಲಹೆ, ಸೂಚನೆ ಪಡೆದು ಶಕ್ತಿಯುತ ದೇಶ ಕಟ್ಟಲು ಯುವಕರು ಸನ್ನದ್ಧರಾಗಬೇಕು ಎಂದು ನೌಕಾದಳ ನಿವೃತ್ತ ಅಧಿಕಾರಿ ವಿರುಪಾಕ್ಷಪ್ಪ ವಿಟ್ಟಣ್ಣವರ ಹೇಳಿದರು.
ಇಲ್ಲಿಯ ಐಬಿಎಂಆರ್ ಸಮೂಹ ಸಂಸ್ಥೆಗಳ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ೭೭ನೇ ಗಣರಾಜ್ಯೋತ್ಸವದಲ್ಲಿ ಅತಿಥಿಗಳಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಶ್ರದ್ಧೆ, ಪ್ರಾಮಾಣಿಕತೆಯೊಂದಿಗೆ ಕೆಲಸ ನಿರ್ವಹಿಸಿ ದೇಶದ ಸರ್ವಾಂಗೀಣ ಅಭಿವೃದ್ಧಿ, ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಐಬಿಎಂಆರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿನಯಚಂದ್ರ ಮಹೇಂದ್ರಕರ ಹಾಗೂ ಟ್ರಸ್ಟಿ ಸುಮಾ ಮಹೇಂದ್ರಕರ್ ನೇತೃತ್ವ ವಹಿಸಿದ್ದರು.
ಸಂಸ್ಥೆಯ ಸಿಇಒ ಡಾ. ಇಘ್ನೇಶ್ ಸಕ್ರಿ, ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಅರುಣ್ ಶೆಟ್ಟಿ. ಡಾ. ರೇಖಾ ಮಹೇಂದ್ರಕರ್, ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಡಾ. ಶಂಕರ ಚಕ್ರವರ್ತಿ, ಸುಮಂತ್ ಬಿ. ಪ್ರದೀಪ ಶರ್ಮಾ. ನಜೀಮ್ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡರು.
ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಬಿ.ಇಡಿ ಕಾಲೇಜಿನ ಪ್ರ ಶಿಕ್ಷಣಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪ್ರಶಿಕ್ಷಣಾರ್ಥಿ ಸ್ವಾತಿ ಚಿಕ್ಕಮಠ ಸಂವಿಧಾನ ದ ವಿಶೇಷತೆ ಕುರಿತು ಮಾತನಾಡಿದರು.
ಬಿಎ ವಿಭಾಗದ ಮುಖ್ಯಸ್ಥ ಪ್ರೊ. ಅಣ್ಣಪ್ಪ ಅತಿಥಿಗಳ ಪರಿಚಯ ಮಾಡಿದರು.
ವಿದ್ಯಾರ್ಥಿನಿಯರಾದ ಜೀನಿತ್ ಸನದಿ, ಅಲಿಷಾ ದಾಸ್ ಕಾರ್ಯಕ್ರಮ ನಿರೂಪಿಸಿದರು.
ಅರುಣ ಶೆಟ್ಟಿ ವಂದಿಸಿದರು.