literature ಹುಬ್ಬಳ್ಳಿಯ ಮಹಿಳಾ ಸಾಹಿತ್ಯ ಪರಿಷತ್ ಸಮ್ಮೇಳನದ ಮಾಹಿತಿ ನೀಡಿದ ಗಂಗಾಧರ ದೊಡ್ಡವಾಡ. 
ಧಾರವಾಡ

literature ಹುಬ್ಬಳ್ಳಿ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ

ಪ್ರಮುಖ ಮುಖ್ಯಾಂಶಗಳು

  • ಪ್ರಥಮ ಸಮ್ಮೇಳನದ ಸರ್ವಾಧ್ಯಕ್ಷ ಭಾರತಿ ರಾಜಗುರು
  • ಮಹಿಳೆಯರಿಗೆ ಪ್ರಧಾನ ವೇದಿಕೆ ಒದಗಿಸುವ ಉದ್ದೇಶ
ಹುಬ್ಬಳ್ಳಿ: literature ಅಖಿಲ ಕರ್ನಾಟಕ ಮಹಿಳಾ ಕನ್ನಡ ಸಾಹಿತ್ಯ ಪರಿಷತ್​ ಹುಬ್ಬಳ್ಳಿ ಧಾರವಾಡ ಘಟಕ ವತಿಯಿಂದ ಮಹಿಳೆಯರಿಗೆ ಪ್ರಧಾನ ವೇದಿಕೆ ಒದಗಿಸುವ ಸಲುವಾಗಿ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನವನ್ನು ಜ. 31ರಂದು ನಗರದ ಸಿದ್ಧಾರೂಢ ಮಠ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಪರಿಷತ್​ ಸಂಸ್ಥಾಪಕ ಗಂಗಾಧರ ದೊಡ್ಡವಾಡ ತಿಳಿಸಿದರು.
ಪ್ರಥಮ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಭಾರತಿ ರಾಜಗುರು ಅವರನ್ನು ಬೆಳಗ್ಗೆ 9ಕ್ಕೆ ಅಲಂಕೃತ ವಾಹನದಲ್ಲಿ ಶ್ರೀ ಸಿದ್ಧಾರೂಢ ಮಠ ಮಹಾದ್ವಾರದಿಂದ ಮೆರವಣಿಗೆ ಮೂಲಕ ಕರೆತರಲಾಗುವುದು. ಡೊಳ್ಳು, ಜಾಂಜ್​ಮೇಳ, ಕರಡಿಮಜಲು, ಜಗ್ಗಲಗಿ ಮೇಳ, ಹೆಜ್ಜೆ ಮೇಳ ಸೇರಿ 20ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಲಿವೆ.
ಡಿಡಿಪಿಯು ತೇಜಶ್ವಿನಿ ನಾರಾಯಣಕರ, ಲೀಲಕ್ಕ ಬೆಲ್ಲದ, ಮಹಾದೇವಿ ಕೊಪ್ಪದ, ಲೀಲಾವತಿ ಹಿರೇಮಠ ಇತರರು ಪಾಲ್ಗೊಳ್ಳುವರು. ಪ್ರೊ. ಶಾರದಾ ಡಂಬಳ, ಶಾರದಾ ಕೌದಿ ಅವರು ಉಪನ್ಯಾಸ ನೀಡುವರು.
ಪರಿಷತ್​ನ ನಗರ ಹಾಗೂ ಗ್ರಾಮೀಣ ತಾಲೂಕು ಘಟಕಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿರುವ ಸಮ್ಮೇಳನದಲ್ಲಿ ವಿವಿಧ ಗೋಷ್ಠಿ, ಸಂವಾದಗಳು ನಡೆಯಲಿವೆ. ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಜಾನಪದ ಹಾಡು, ನೃತ್ಯ ಮುಂತಾದ ಚಟುವಟಿಕೆಗಳು ಜರುಗಲಿವೆ ಎಂದರು.