Marathon ಹುಬ್ಬಳ್ಳಿಯ ಗೋಕುಲ ರಸ್ತೆ ಕೆಎಲ್ ಇ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಏರ್ಪಡಿಸಿದ್ದ ಹುಬ್ಬಳ್ಳಿ ಹಾಫ್ ಮ್ಯಾರಾಥಾನ್ ನಲ್ಲಿ ಪಾಲ್ಗೊಂಡ ಜನರು. 
ಧಾರವಾಡ

Marathon ಹುಬ್ಬಳ್ಳಿ ಹಾಫ್ ಮ್ಯಾರಥಾನ್ ಗೆ ಭರ್ಜರಿ ಪ್ರತಿಕ್ರಿಯೆ

ಬಸವರಾಜ ಎಸ್. ಇದ್ಲಿ

ಪ್ರಮುಖ ಮುಖ್ಯಾಂಶಗಳು

  • ಕೊರೆಯುವ ಚಳಿಯಲ್ಲೂ ಓಟದಲ್ಲಿ ಭಾಗಿ
  • ಉತ್ಸಾಹದಿಂದ ಪಾಲ್ಗೊಂಡ ಮಕ್ಕಳು, ಹಿರಿಯರು
  • ವಿಆರ್ ಎಲ್ ಸಮೂಹ ಸಂಸ್ಥೆಗಳ ಸಹಯೋಗ
ಐದು, ಹತ್ತು ಹಾಗೂ ೨೧ ಕಿ.ಮೀ ವಿಭಾಗದಲ್ಲಿ ಸುಮಾರು ೩೨೦೦ ಜನರು ಭಾಗವಹಿಸಿ ತಮ್ಮ ಉತ್ಸಾಹ ಪ್ರದರ್ಶಿಸಿದರು.
ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಮೂರು ವಿಭಾಗದಲ್ಲಿ ಕ್ರೀಡಾಪಟುಗಳಲ್ಲದೇ ಅನೇಕ ಸಾರ್ವಜನಿಕರು ಹುಮ್ಮಸ್ಸಿನಿಂದ ಭಾಗಿಯಾದರು.
ವಿವಿಧ ಸಂಘಟನೆಗಳು, ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ನಡೆದ ಮ್ಯಾರಾಥಾನ್ ನಲ್ಲಿ ಮಕ್ಕಳು, ಹಿರಿಯರು ಎನ್ನದೇ ಎಲ್ಲ ವಯೋಮಾನದ ಪುರುಷ, ಮಹಿಳೆಯರು ಪಾಲ್ಗೊಂಡರು.