ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪ ಗ್ರಾಮದಲ್ಲಿ ಮಾದಕ ದ್ರವ್ಯ ವಿರೋಧಿ ಅಭಿಯಾನ ನಡೆಸಲಾಯಿತು. 
ಧಾರವಾಡ

ಗಾಂಜಾ ತಡೆಗೆ ಕಲಘಟಗಿ ಪೊಲೀಸರ ಪಣ ganja

ಪ್ರಮುಖ ಮುಖ್ಯಾಂಶಗಳು

  • ಶಾಲಾ ಕಾಲೇಜುಗಳಲ್ಲಿ ಜಾಗೃತಿ ಜಾಥಾ, ಸ್ಪರ್ಧೆ
ಕಲಘಟಗಿ: ಜಿಲ್ಲೆಯಲ್ಲಿ ಇತ್ತೀಚೆಗೆ ಗಾಂಜಾ ಸೇವನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಗಾಂಜಾ ಸೇವನೆ ಆರೋಗ್ಯಕ್ಕೆ ಮಾರಕ ಹಾಗೂ ಕಾನೂನು ಬಾಹಿರ ಎಂಬ ಧ್ಯೇಯೋದ್ದೇಶದಿಂದ ಜಿಲ್ಲಾ ಪೊಲೀಸ್ ಇಲಾಖೆ ಮಾರ್ಗದರ್ಶನ್ವಯ ಮಾದಕ ದ್ರವ್ಯ ವಿರೋಧಿ ಅಭಿಯಾನವನ್ನು ಕಲಘಟಗಿ ಪೊಲೀಸರು ಕೈಗೊಂಡಿದ್ದಾರೆ.
ಯುವಕರು ದುಶ್ಚಟಗಳಿಂದ ಆರೋಗ್ಯದ ಜತೆಗೆ ಬದುಕನ್ನು ಕೂಡ ಹಾಳು ಮಾಡಿಕೊಳ್ಳುತ್ತಿರುವ ಬಗ್ಗೆ ಪ್ರಕರಣಗಳ ಹೆಚ್ಚಾಗುತ್ತಿವೆ. ಕಲಿಕಾ ಹಂತದಲ್ಲಿಯೇ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇದರಿಂದಾಗುವ ಅಡ್ಡಪರಿಣಾಮಗಳ ಬಗ್ಗೆ ಕಲಘಟಗಿ ಪೊಲೀಸರು ಪ್ರತಿದಿನ ಇಲಾಖೆಯಿಂದ ತಾಲೂಕಿನ ವಿವಿಧ ಶಾಲಾ, ಕಾಲೇಜುಗಳಲ್ಲಿ ಜಾಗೃತಿ ಜಾಥಾ ಮತ್ತು ವ್ಯಸನಮುಕ್ತ ಸಮಾಜ ಘೋಷವಾಕ್ಯದೊಂದಿಗೆ ಅನೇಕ ಕಾರ್ಯಕ್ರಮ ಆಯೋಜಿಸಿದೆ. ಪಿಪಿಟಿ ಮೂಲಕ ಗಾಂಜಾ ಸೇವನೆಯಿಂದಾಗುವ ಅಡ್ಡ ಪರಿಣಾಮಗಳ ಬಗ್ಗೆ ತಿಳಿವಳಿಕೆ ನೀಡಲಾಗುತ್ತಿದೆ. 
ಜಾಲತಾಣಗಳಲ್ಲಿ ಮನವಿ: ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿ, ಮಾದಕ ವಸ್ತುಗಳು ಸಮಾಜವನ್ನು ನಾಶ ಮಾಡುತ್ತವೆ. ಡ್ರಗ್ಸ್‌ಮುಕ್ತ ಧಾರವಾಡ ಎಂಬ ಜಿಲ್ಲಾ ಪೊಲೀಸ್ ಇಲಾಖೆಯ ಘೋಷವಾಕ್ಯದೊಂದಿಗೆ ಗಾಂಜಾ ಬೆಳೆಸುವುದು, ಸೇವಿಸುವುದು, ಸಾಗಿಸುವುದು ಮತ್ತು ಮಾರಾಟ ಮಾಡುವುದು ಕಾನೂನು ಬಾಹಿರ ಎಂದು ಮನವರಿಕೆ ಮಾಡಲು ವಾಟ್ಸ್ ಆ್ಯಪ್, ಫೇಸ್‌ಬುಕ್, ಟ್ವಿಟರ್, ಇನ್‌ಸ್ಟ್ರಾಗ್ರಾಂ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರು ಜಾಗೃತಿ ಅಭಿಯಾನ ಕೈಗೊಂಡಿದ್ದಾರೆ.
ತಾಲೂಕಿನ ಸೂರಶೆಟ್ಟಿಕೊಪ್ಪ, ದಾಸ್ತಿಕೊಪ್ಪ, ಕಲಘಟಗಿ, ಮಿಶ್ರಿಕೋಟಿ, ಹಿರೇಹೊನ್ನಳ್ಳಿ ಸೇರಿದಂತೆ ವಿವಿಧ ಅನೇಕ ಗ್ರಾಮಗಳ ಶಾಲಾ, ಕಾಲೇಜುಗಳಲ್ಲಿ ಈಗಾಗಲೇ ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಜಾಗೃತಿ ಜಾಥಾ ಅಭಿಯಾನ ನಡೆಸಲಾಗಿದೆ. ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಗುತ್ತಿದೆ.
ಗಾಂಜಾ ಸೇವನೆ ಕೇಸ್ ಪತ್ತೆ: ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ 2 ಗಾಂಜಾ ಪ್ರಕರಣಗಳು ಪತ್ತೆಯಾಗಿದ್ದು, ಬಂಧಿತರಿಂದ 730 ಗ್ರಾಂ ಗಾಂಜಾ  ವಶಪಡಿಸಿಕೊಳ್ಳಲಾಗಿದೆ. 
"

ಗಾಂಜಾ ಪ್ರಕರಣಗಳನ್ನು ತಡೆಯುವ ಸಲುವಾಗಿ ಕಲಘಟಗಿ ಪೊಲೀಸ್ ಇಲಾಖೆಯಿಂದ ತಾಲೂಕಿನ ವಿವಿಧ ಶಾಲಾ, ಕಾಲೇಜು ಹಾಗೂ ಗ್ರಾಮೀಣ ಭಾಗಗಳಲ್ಲಿ ವಿಶೇಷ ಜಾಗೃತಿ ಜಾಥಾ ಅಭಿಯಾನ ಮಾಡಲಾಗುತ್ತಿದೆ. ಗಾಂಜಾ ಪ್ರಕರಣಗಳ ತಡೆಗಾಗಿ ಪ್ರತಿಯೊಬ್ಬ ನಾಗರಿಕನೂ ನಮ್ಮೊಂದಿಗೆ ಕೈಜೋಡಿಸಬೇಕಾಗಿದೆ. ಗಾಂಜಾ ಹಾಗೂ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಶ್ರೀಶೈಲ ಕೌಜಲಗಿ ಕಲಘಟಗಿ ಸಿಪಿಐ