ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ 540 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದಿಸುವ ‘ಹುಬ್ಬಳ್ಳಿ ಹೆಮ್ಮೆ’ hubballi hemme ಕಾರ್ಯಕ್ರಮವನ್ನು ಹುಬ್ಬಳ್ಳಿಯಲ್ಲಿ ಶನಿವಾರ ಏರ್ಪಡಿಸಲಾಗಿತ್ತು.
ಹುಬ್ಬಳ್ಳಿ: ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ 540 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದಿಸುವ ‘ಹುಬ್ಬಳ್ಳಿ ಹೆಮ್ಮೆ’ hubballi hemme ಕಾರ್ಯಕ್ರಮವನ್ನು ಇಲ್ಲಿಯ ವ್ನಿೇಶ್ವರ ಶಾಲಾ ಮೈದಾನದಲ್ಲಿ ಶನಿವಾರ ಏರ್ಪಡಿಸಲಾಗಿತ್ತು.
ನೇತೃತ್ವ ವಹಿಸಿದ್ದ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಮಾತನಾಡಿ, ಈ 540 ವಿದ್ಯಾರ್ಥಿಗಳು ನಮ್ಮ ಹುಬ್ಬಳ್ಳಿಯ ಭವಿಷ್ಯದ ಆಸ್ತಿ. ಕೇವಲ ಅಂಕಗಳಿಕೆಯಷ್ಟೇ ಸಾಧನೆಯಲ್ಲ, ಕಲಿತ ವಿದ್ಯೆಯನ್ನು ಸಮಾಜದ ಒಳಿತಿಗಾಗಿ ಬಳಸುವ ಸಂಕಲ್ಪ ನಿಮ್ಮದಾಗಬೇಕು. ನಿಮ್ಮ ಸಾಧನೆ ಹಿಂದೆ ಪಾಲಕರ ತ್ಯಾಗ ಮತ್ತು ಶಿಕ್ಷಕರ ಮಾರ್ಗದರ್ಶನವಿದೆ. ವಿದ್ಯಾರ್ಥಿ ಜೀವನದ ಈ ಯಶಸ್ಸು ನಿಮ್ಮ ಮುಂದಿನ ಉನ್ನತ ಶಿಕ್ಷಣದ ಹಾದಿಯಲ್ಲಿ ಒಂದು ಮೈಲಿಗಲ್ಲಾಗಲಿ ಎಂದು ಹಾರೈಸಿದರು.
ಕರ್ನಾಟಕ ಸರ್ಕಾರದ ಬಾಲ ವಿಕಾಸ ಅಕಾಡೆಮಿ ಸದಸ್ಯೆ ಮೇಘನಾ ಹಿರೇಮಠ ಮಾತನಾಡಿ, ನಮ್ಮ ವಿದ್ಯಾರ್ಥಿಗಳ ಸಾಧನೆ ಇಡೀ ನಗರಕ್ಕೆ ಕೀರ್ತಿ ತಂದಿದೆ. ರಜತ್ ಉಳ್ಳಾಗಡ್ಡಿಮಠ ಅವರ ಈ ದೂರದೃಷ್ಟಿಯ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯವನ್ನು ತುಂಬಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರೇಮನಾಥ ಚಿಕ್ಕತುಂಬಳ, ಅಡಿವೇಶ ಇಟಗಿ, ವೀರೇಶ ಕಡಕೋಳಮಠ, ಪ್ರಕಾಶ ಹಳಿಯಾಳ, ಸಂಗಮೇಶ ಗೌರಕ್ಕನವರ, ಅಜ್ಜಪ್ಪ ರಾಯಾಪುರ, ಜಗದೀಶ ನೆಲ್ಗುಡ, ರಾಜೇಂದ್ರ ಪಾಟೀಲ, ವಿದ್ಯಾನಗರ ಬ್ಲಾಕ್ ಕಾಂಗ್ರೆಸ್‌ನ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.