ಹುಬ್ಬಳ್ಳಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶ ಕ್ಯಾರಕಟ್ಟಿ ಮಾತನಾಡಿದರು. ಗುರುನಾಥ ಮುರಗೋಡ, ಕಿರಣ ಭರಾಡೆ, ಸುಧೀರ ಹೊಸಮನಿ, ಇತರರಿದ್ದರು.  
ಧಾರವಾಡ

ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ 4ರಿಂದ shri krishna

ಪ್ರಮುಖ ಮುಖ್ಯಾಂಶಗಳು

  • ಗೋಕುಲ ರಸ್ತೆಯ ಆರ್.ಎನ್. ಶೆಟ್ಟಿ ಮಾರ್ಗದ ಚೈತನ್ಯನಗರದಲ್ಲಿ ಆಯೋಜನೆ
ಹುಬ್ಬಳ್ಳಿ: ಗೋಕುಲ ರಸ್ತೆಯ ಆರ್.ಎನ್. ಶೆಟ್ಟಿ ಮಾರ್ಗದ ಚೈತನ್ಯನಗರದಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಸೆ. 4 ಮತ್ತು 5ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುವುದು ಎಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶ ಕ್ಯಾರಕಟ್ಟಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸೆ. 4ರಂದು ರಾತ್ರಿ 12 ಗಂಟೆಗೆ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಶ್ರೀ ಬಾಲ ಕೃಷ್ಣನನ್ನು ತೊಟ್ಟಿಲಲ್ಲಿ ಹಾಕುವ ಕಾರ್ಯಕ್ರಮವಿದೆ. ಸೆ. 5ರಂದು 9 ಬೆಳಗ್ಗೆ ಗಂಟೆಗೆ ಚೈತನ್ಯ ನಗರದಿಂದ ಅಕ್ಷಯ ಪಾರ್ಕ್ ಸಂತೆ ಮೈದಾನದವರೆಗೆ ಮೊಸರಿನ ಗಡಿಗೆ ಹೊತ್ತುಕೊಂಡು ಶ್ರೀ ಕೃಷ್ಣ-ರಾಧೆಯರ ವೇಷ ಭೂಷಣ ಧರಿಸಿದ ಸಾವಿರಕ್ಕೂ ಅಧಿಕ ಮಕ್ಕಳೊಂದಿಗೆ ಬೃಹತ್ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಗೊಂಬೆ ಕುಣಿತ, ಜಗ್ಗಲಗಿ ಮೇಳ, ಡೊಳ್ಳು ಕುಣಿತ ಮೇಳಗಳು ಪಾಲ್ಗೊಳ್ಳಲಿವೆ ಎಂದರು.
ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣಾ ಗಂಡಗಾಳೇಕರ ಮಾತನಾಡಿ, ಸೆ. 5ರಂದು  ಬೆಳಗ್ಗೆ 11 ಗಂಟೆಗೆ ಆಯೋಜಿಸಿರುವ ಮೊಸರಿನ ಗಡಿಗೆ ಒಡೆಯುವ ಸ್ಪರ್ಧೆ ಮತ್ತು ಸಭಾ ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವರು. ಅತಿಥಿಗಳಾಗಿ ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಎಂ.ಆರ್. ಪಾಟೀಲ, ಲಿಂಗರಾಜ ಪಾಟೀಲ ಮತ್ತಿತರರು ಪಾಲ್ಗೊಳ್ಳುವರು. ಮಾಜಿ ಮಹಾಪೌರ ಪ್ರಕಾಶ ಕ್ಯಾರಕಟ್ಟಿ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 1ಕ್ಕೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಮೊಸರಿನ ಗಡಿಗೆ ಒಡೆಯುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ 50 ಸಾವಿರ ರೂ. ಬಹುಮಾನ ಜತೆಗೆ ಪಾರಿತೋಷಕ ನೀಡಲಾಗುವುದು ಎಂದರು. ಗುರುನಾಥ ಮುರಗೋಡ, ಕಿರಣ ಭರಾಡೆ, ಸುಧೀರ ಹೊಸಮನಿ, ರವಿ ನಾಯಕ, ಅಜಯ ಭರಾಡೆ ಸುದ್ದಿಗೋಷ್ಠಿಯಲ್ಲಿ ಇದ್ದರು.