hu balli ಹೂವು ಬಳ್ಳಿಯ ಮೇಳ. 
ಧಾರವಾಡ

hu balli ಹುಬ್ಬಳ್ಳಿಯಲ್ಲಿ ಹೂವು ಬಳ್ಳಿಯ ಮೇಳ ಶುರು

ಪ್ರಮುಖ ಮುಖ್ಯಾಂಶಗಳು

  • ಕುಮಾರ ಪಾರ್ಕ್​ ಯಶಸ್ವಿ ಎನ್​ಕ್ಲೇವ್​ನಲ್ಲಿ ಆಯೋಜನೆ
  • ಮೂರು ದಿನಗಳ ವರೆಗೆ ಪ್ರದರ್ಶನ
ಹುಬ್ಬಳ್ಳಿ: hu balli ಹೊಸ ಮನೆ, ಅಂಗಡಿ ಮತ್ತು ಬಾಡಿಗೆ ವಾಣಿಜ್ಯ ಆಸ್ತಿಗಳ ಮಾರಾಟ ಕುರಿತು ಹೂವು ಬಳ್ಳಿಯ ಮೇಳವನ್ನು ಯಶಸ್ವಿ ಡೆವಲಪರ್ಸ್​ ಆಶ್ರಯದಲ್ಲಿ ಜೂನ್​ 26ರಿಂದ ಮೂರು ದಿನಗಳ ವರೆಗೆ ಗೋಕುಲ ರಸ್ತೆ ಕೆಇಸಿ ಎದುರಿನ ಗಾಂಧಿನಗರ ಕುಮಾರ ಪಾರ್ಕ್​ ಯಶಸ್ವಿ ಎನ್​ಕ್ಲೇವ್​ನಲ್ಲಿ ಏರ್ಪಡಿಸಲಾಗಿದೆ.
ಜೂನ್​ 26ರಂದು ಬೆಳಗ್ಗೆ 11ಕ್ಕೆ ರುದ್ರಾಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಉದ್ಘಾಟಿಸಲಾಗುವುದು. ಮಾಜಿ ಸಿಎಂ ಜಗದೀಶ ಶೆಟ್ಟರ್​, ಮಲ್ಲಿಕಾರ್ಜುನ ಸಾವಕಾರ, ಜಿ.ಬಿ. ಹಳ್ಯಾಳ, ರಮೇಶ ಪಾಟೀಲ್​ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಜೆ 6ಕ್ಕೆ ಬಿಗ್​ ಬಾಸ್​ ವಿಜೇತ ಹನುಮಂತ ಲಮಾಣಿ ಮತ್ತು ತಂಡದಿಂದ ರಸ ಸಂಜೆ ನಡೆಯಲಿದೆ.
ಜೂನ್​ 27ರಂದು ಬೆಳಗ್ಗೆ 11ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್​ ಡಾ. ವಿಜಯ ಸಂಕೇಶ್ವರ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಜೆ 6ಕ್ಕೆ ಗಂಗಾವತಿ ಪ್ರಾಣೇಶ ಮತ್ತು ತಂಡದಿಂದ ಹಾಸ್ಯ ಸಂಜೆ ನಡೆಯಲಿದೆ.
ಜೂನ್​ 28ರಂದು ಬೆಳಗ್ಗೆ 11ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಕೆಎಲ್​ಇ ಮಾಜಿ ಅಧ್ಯಕ್ಷ ಡಾ. ಪ್ರಭಾಕರ ಕೋರೆ, ಶಂಕರಣ್ಣ ಮುನವಳ್ಳಿ, ಡಾ. ಎಸ್​.ಪಿ. ಬಳಿಗಾರ, ಡಾ. ಜಿ.ಬಿ. ಸತ್ತೂರ, ವೀರೇಂದ್ರ ಕೌಜಲಗಿ, ವಿಜಯ ಮೆಟಗುಡ್ಡ, ಆನಂದ ಮನಗುಳಿ ಅತಿಥಿಗಳಾಗಿ ಪಾಲ್ಗೊಳ್ಳುವರು.