hpva cricket ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಏರ್ಪಡಿಸಿರುವ ಎಚ್​ಪಿವಿಎ ಕ್ರಿಕೆಟ್​ ಪಂದ್ಯಾವಳಿಗೆ ಸ್ವರ್ಣ ಸಮೂಹ ಸಂಸ್ಥೆಯ ಎಂಡಿ ಡಾ. ವಿ.ಎಸ್​.ವಿ. ಪ್ರಸಾದ ಚಾಲನೆ ನೀಡಿದರು. ಕಿರಣ ಬಾಕಳೆ, ದಿನೇಶ್​ ದಾಬಡೆ, ಇಂದೂಧರ ಸಾಲಿ, ಇತರರು ಇದ್ದರು. 
ಧಾರವಾಡ

hpva cricket ಎಚ್​ಪಿವಿಎ ಕ್ರಿಕೆಟ್​ ಟೂರ್ನಿ ಆರಂಭ

ಹುಬ್ಬಳ್ಳಿ: hpva cricket ಇಲ್ಲಿಯ ಫೋಟೋ ಹಾಗೂ ವೀಡಿಯೋಗ್ರಾಫರ್​ ಸಂಘದ (ಎಚ್​ಪಿವಿಎ) ಆಶ್ರಯದಲ್ಲಿ ಮೂರನೇ ಆವೃತ್ತಿಯ ಅಂತರ್​ ಸಂಘ ವಲಯ ಟೆನಿಸ್​ ಬಾಲ್​ ಕ್ರಿಕೆಟ್​ ಪಂದ್ಯಾವಳಿಗೆ ನಗರದ ನೆಹರು ಮೈದಾನದಲ್ಲಿ ಬುಧವಾರ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.
ಎರಡು ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಯನ್ನು ಸ್ವರ್ಣ ಸಮೂಹ ಸಂಸ್ಥೆಯ ಎಂಡಿ ಡಾ. ವಿ.ಎಸ್​.ವಿ. ಪ್ರಸಾದ ಅವರು ಬ್ಯಾಟ್​ ಬೀಸುವ ಮೂಲಕ ಬುಧವಾರ ಉದ್ಘಾಟಿಸಿದರು.
ಸಂಘದ ಅಧ್ಯಕ್ಷ ಕಿರಣ ಬಾಕಳೆ ಮಾತನಾಡಿ, ಪಂದ್ಯಾವಳಿ ಕೇವಲ ಸ್ಪರ್ಧೆಯಲ್ಲ, ಫೋಟೋ ಹಾಗೂ ವೀಡಿಯೋಗ್ರಾಫರ್​ ಸಮುದಾಯದ ಏಕತೆ ಮತ್ತು ಸೌಹಾರ್ದತೆಯನ್ನು ಗಟ್ಟಿಗೊಳಿಸುವ ವೇದಿಕೆಯಾಗಿದೆ ಎಂದು ತಿಳಿಸಿದರು.
ಅತಿಥಿಗಳಾಗಿ ಡಾ. ರಮೇಶ ಮಹಾದೇವಪ್ಪನವರ, ಸಂಘದ ಉಪಾಧ್ಯಕ್ಷ ದಿನೇಶ್​ ದಾಬಡೆ, ಮಾಜಿ ಅಧ್ಯಕ್ಷ ಇಂದೂಧರ ಸಾಲಿ, ರವೀಂದ್ರ ಕಾಟಿಗರ ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಛಾಯಾಗ್ರಾಹಕರು ಉಪಸ್ಥಿತರಿದ್ದರು.
ಎಚ್​ಪಿವಿಎ ಕ್ರಿಕೆಟ್​ ಕಮಿಟಿ ಸದಸ್ಯರಾದ ಪವನ ಕಠಾರೆ, ಕಿಶನ್​ ಶಾಲಗಾರ, ವಿಜಯ ಪೂಜಾರಿ, ಕೃಷ್ಣ ಪೂಜಾರಿ, ರವಿ ಪಟ್ಟಣ, ರೋಷನ್​ ಅಥಣಿ, ರವಿ ಕಂಡಿ, ಅಮೃತ ಅರಸಿದ್ಧ, ಕಿರಣ ಮೆಹರವಾಡೆ, ರಿತೇಶ ಭೋಜಗಾರ, ವಿಶಾಲ ಪೂಜಾರಿ, ಗಣೇಶ ಜಿತೂರಿ, ಸಚಿನ್​ ಪವಾರ್, ನಾರಾಯಣ ಜಡಿ, ಶ್ರೀನಿವಾಸ ಕಾಟಿಗರ ಹಾಗೂ ರಾಜನ್​ ಮಿಚೆಲ್​ ಪಂದ್ಯಾವಳಿಯಲ್ಲಿ ಪಾಲ್ಗೊಂಡರು.