hpv awareness ಹುಬ್ಬಳ್ಳಿಯ ವಿಶ್ವೇಶ್ವರ ನಗರ ಶಾಲೆಯಲ್ಲಿ ಎಎಎಫ್ಎ ತಂಡದ ಸದಸ್ಯರು ಎಚ್​ಪಿವಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿದರು. 
ಧಾರವಾಡ

hpv awareness ಎಎಎಫ್ಎದಿಂದ ಎಚ್​ಪಿವಿ ಲಸಿಕೆ ಅಭಿಯಾನ

ಪ್ರಮುಖ ಮುಖ್ಯಾಂಶಗಳು

  • ಬಾಲಕಿಯರು ಪೋಷಕರಿಗೆ ಜಾಗೃತಿ
  • 9ರಿಂದ 14 ವರ್ಷದವರಿಗೆ ಎಚ್​ಪಿವಿ ಲಸಿಕೆ ಮುಖ್ಯ
ಹುಬ್ಬಳ್ಳಿ: hpv awareness ಅಲ್ಲು ಅರ್ಜುನ ಫ್ಯಾನ್ಸ್ ಅಸೋಸಿಯೇಶನ್​ (ಎಎಎಫ್ಎ) ಕರ್ನಾಟಕ ತಂಡ ಹುಬ್ಬಳ್ಳಿ-ಧಾರವಾಡ ಘಟಕದ ವತಿಯಿಂದ ಎಚ್​ಪಿವಿ ಲಸಿಕೆ ಜಾಗೃತಿ ಅಭಿಯಾನವನ್ನು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಹಮ್ಮಿಕೊಳ್ಳಲಾಯಿತು.
ಘಟಕದ ಸದಸ್ಯರು ಜಿಲ್ಲೆಯ ವಿವಿಧ ಕಡೆ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಜಾಗೃತಿ ಮೂಡಿಸಿದರು.
ಎಚ್​ಪಿವಿ (ಹ್ಯೂಮನ್​ ಪ್ಯಾಪಿಲೋಮಾ ವೈರಸ್​) ಲಸಿಕೆಯ ಮಹತ್ವ ಮತ್ತು ಗರ್ಭಕಂಠದ ಕ್ಯಾನ್ಸರ್​ ತಡೆಗಟ್ಟುವ ಕುರಿತು ಮಾಹಿತಿ ನೀಡಲಾಯಿತು. ಒಂಬತ್ತರಿಂದ 14 ವರ್ಷದ ಬಾಲಕಿಯರು ಎಚ್​ಪಿವಿ ಲಸಿಕೆ ಪಡೆಯಬೇಕು,
ಇದರಿಂದ ಬಹಳಷ್ಟು ಅನುಕೂಲಗಳಿವೆ ಎಂದು ಎಎಎಫ್ಎ ಕರ್ನಾಟಕ ಟೀಮ್​ ಹುಬ್ಬಳ್ಳಿ -ಧಾರವಾಡದ ಪ್ರತಿನಿಧಿಗಳು ಅಭಿಪ್ರಾಯಪಟ್ಟರು.
ಹುಬ್ಬಳ್ಳಿಯ ಬಸವೇಶ್ವರನಗರ ಕಸ್ತೂರ ಬಾ ಬಾಲಿಕಾ ವಸತಿ ವಿದ್ಯಾಲಯ, ಉಣಕಲ್ಲನ ರಾಚಯ್ಯ ಚನ್ನಯ್ಯ ಚಿಕ್ಕಮಠ ಸರ್ಕಾರಿ ಕನ್ನಡ ಮಾಧ್ಯಮ ಶಾಲೆ, ವಿಶ್ವೇಶ್ವರನಗರದ ಸರ್ಕಾರಿ ಪ್ರೌಢಶಾಲೆ.
ಕಲಘಟಗಿ ತಾಲೂಕಿನ ಗಂಜಿಗಟ್ಟಿ ಹಾಗೂ ಮಿಶ್ರಿಕೋಟಿ ಹೆಣ್ಣು ಮಕ್ಕಳ ಶಾಲೆಗಳಲ್ಲಿ ಎಎಎಫ್ಎ ತಂಡದ ವತಿಯಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸಿನಂತೆ 9ರಿಂದ 14 ವರ್ಷದ ಬಾಲಕಿಯರಿಗೆ ಎಚ್​ಪಿವಿ ಲಸಿಕೆ ನೀಡುವುದು ಅತ್ಯಂತ ಮುಖ್ಯವಾಗಿದೆ. ಹಿಂದೆ ಖಾಸಗಿ ಆಸ್ಪತ್ರೆಗಳಲ್ಲಿ ಎಚ್​ಪಿವಿ ಲಸಿಕೆ ಭಾರಿ ವೆಚ್ಚದಾಯಕವಾಗಿತ್ತು.
ಇದೀಗ ಉಚಿತವಾಗಿ ಲಸಿಕೆ ಲಭ್ಯವಾಗುತ್ತಿರುವುದು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ತಂಡದ ಸದಸ್ಯರು ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಜಾಕೆಟ್​ ಹಾಗೂ ಇತರ ಕಲಿಕಾ ಸಾಮಗ್ರಿಗಳನ್ನು ಸಹ ತಂಡ ವಿತರಿಸಿತು.
ಎಎಎಫ್ಎ ಕರ್ನಾಟಕ ರಾಜ್ಯಾಧ್ಯಕ್ಷ ಸುನೀಲ್​ ಜೆ.ಎನ್​. ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಅಧ್ಯಕ್ಷ ಗೋವರ್ಧನ ಟಗರಗುಂಟಿ, ಉಪಾಧ್ಯಕ್ಷರಾದ ಪ್ರವಿಣ ಬಿ. ಹಾಗೂ ವಿನಯ.
ಕಾರ್ಯದರ್ಶಿಗಳಾದ ಶಿವಾನಂದ ಬಂಕಾಪುರ, ಸಾಹಿಲ್​ ಹಾಗೂ ಶ್ರಾವಣ, ಪ್ರಧಾನ ಕಾರ್ಯದರ್ಶಿಗಳಾದ ಶಿವರಾಜ, ಕಾರ್ತಿಕ ಹಾಗೂ ಅನಿಲ, ವಸಂತ, ಜಂಟಿ ಕಾರ್ಯದರ್ಶಿಗಳಾದ ಮನೋಜ, ಮಂಜುನಾಥ, ಆಕಾಶ ಹಾಗೂ ಸಂತೋಷ ಮಾಳಗಿಮನಿ ಇತರರು ಕಾರ್ಯಕ್ರಮದಲ್ಲಿ ಭಾಗಿಯಾದರು.