ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ
ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯದ 75ನೇ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳ ಮೂವರು ಸಾಧಕರಿಗೆ ಗುರುವಾರ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಓಡಿಶಾದ ಶಿಕ್ಷಣ ತಜ್ಞ ಪ್ರೊ. ಅಚ್ಯುತ ಸಾಮಂತ (ಶಿಕ್ಷಣ, ಸಮಾಜಸೇವೆ ಮತ್ತು ರಾಷ್ಟ್ರ ನಿರ್ಮಾಣ), ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತ ನ್ಯಾ. ಜಿ.ಎಸ್. ಸಂಗ್ರೇಶಿ (ಸಾರ್ವಜನಿಕ ಆಡಳಿತ, ನ್ಯಾಯಾಂಗ ಸೇವೆ ಹಾಗೂ ಪ್ರಜಾಭುತ್ವ ಸಂಸ್ಥೆಗಳ ಬಲವರ್ಧನೆ), ಹುಬ್ಬಳ್ಳಿಯ ಮಜೆಥಿಯಾ ಫೌಂಡೇಶನ್ ಸಂಸ್ಥಾಪಕ ಜಿತೇಂದ್ರ ಡಿ. ಮಜೆಥಿಯಾ (ಸಮಾಜಸೇವೆ, ದಾನಧರ್ಮ ಮತ್ತು ಸಮುದಾಯದ ಅಭಿವೃದ್ಧಿ) ಅವರಿಗೆ ರಾಜ್ಯಪಾಲ ಥಾವರಚಂದ್ ಗೆಲಹೋತ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ಇಸ್ರೋ ಮಾಜಿ ಅಧ್ಯಕ್ಷ ಪದ್ಮಶ್ರೀ ಎ.ಎಸ್. ಕಿರಣಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕವಿವಿ ಸಮ ಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ, ಕುಲಪತಿ ಡಾ. ಎ.ಎಂ. ಖಾನ್, ಕುಲಸಚಿವರಾದ ಡಾ. ಶಂಕರ ವಣಿಕ್ಯಾಳ, ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ ಇದ್ದರು.