ಧಾರವಾಡ: ರಂಜಾನ್ ಹಬ್ಬದಂದು ಬೈಕ್ಗೆ ಡಿಕ್ಕಿ ಹೊಡೆದು ಇಬ್ಬರು ಯುವಕರ ಸಾವಿಗೆ ಕಾರಣವಾಗಿದ್ದ ಲಾರಿ ಮತ್ತು ಚಾಲಕನನ್ನು ಧಾರವಾಡ ಸಂಚಾರಿ ಠಾಣೆ ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ.
ಮಾ. 21ರಂದು ಕೆಲಗೇರಿ ಸೇತುವೆ ಬಳಿ ಬೈಕ್ಗೆ ಲಾರಿ ಡಿಕ್ಕಿ ಹೊಡೆದಿದ್ದ ಚಾಲಕ ಲಾರಿ ಸಮೇತ ಪರಾರಿಯಾಗಿದ್ದ. ಅಪಘಾತದಲ್ಲಿ ತಾಲೂಕಿನ ಲಕಮಾಪುರ ಗ್ರಾಮದ ಇಮಾಮ ಹೆಬ್ಬಳ್ಳಿ ಹಾಗೂ ಅನಾಸ್ ಮುಲ್ಲಾನವರ ಎಂಬುವರು ಮೃತಪಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡ ಸಂಚಾರಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ತಮಿಳುನಾಡಿನಲ್ಲಿ ಲಾರಿಯನ್ನು ಪತ್ತೆ ಮಾಡಿದ್ದಾರೆ. ಚಾಲಕ ಸ್ಟಿಲ್ ಬ್ರಿಟ್ಟೋ ಎಂಬಾತನನ್ನು ವಶಕ್ಕೆ ಪಡೆದು ಲಾರಿ ಸಮೇತ ಕರೆತಂದು ಹಿಟ್ ಆ್ಯಂಡ್ ರನ್ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.