ಇಸ್ಮಾಯಿಲ್​ ತಮಟಗಾರ 
ಧಾರವಾಡ

ಇಸ್ಮಾಯಿಲ್​ ತಮಟಗಾರಗೆ ಹೈಕೋರ್ಟ್​ ನಿರೀಕ್ಷಣಾ ಜಾಮೀನು

ಧಾರವಾಡ: ಯುವ ಕಾಂಗ್ರೆಸ್​ ರಾಜ್ಯ ಪ್ರಧಾನ ಕಾರ್ಯದರ್ಶಿ ಫೈರೋಜ್​ ಪಠಾಣ್​ ಕೊಲೆ ಪ್ರಕರಣದ 14ನೇ ಆರೋಪಿಯಾಗಿರುವ ಕಾಂಗ್ರೆಸ್​ ಮುಖಂಡ ಇಸ್ಮಾಯಿಲ್​ ತಮಟಗಾರಗೆ ಹೈಕೋರ್ಟ್​ ಪೀಠ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಏ. 10ರಂದು ಇಲ್ಲಿನ ಹಾಶ್ಮಿನಗರದ ಮನೆಗೆ ನುಗ್ಗಿದ್ದ ಗುಂಪು ಫೈರೋಜ್ ಪಠಾಣ್​ನನ್ನು ಭೀಕರವಾಗಿ ಹತ್ಯೆ ಮಾಡಿತ್ತು. ಇದಕ್ಕೂ ಮೊದಲು ಫೈರೋಜ್ ಮತ್ತು ಇಸ್ಮಾಯಿಲ್​ ತಮಟಗಾರ ನಡುವೆ ಹಲವು ಬಾರಿ ಮೊಬೈಲ್​ ಸಂಭಾಷಣೆ ನಡೆದಿತ್ತು. ಫೈರೋಜ್ ಪಠಾಣ್​ ಸೇರಿ ಜಿಲ್ಲೆ ಹಾಗೂ ರಾಜ್ಯದ ಕಾಂಗ್ರೆಸ್​ ಮುಖಂಡರನ್ನು ಅವಾಚ್ಯವಾಗಿ ನಿಂದಿಸಿದ್ದಲ್ಲದೆ, "ನಿನ್ನನ್ನು ಮನೆ ಹೊಕ್ಕು ಹೊಡೆಯುತ್ತಾರೆ ಹುಷಾರಾಗಿರು' ಎಂದು ಇಸ್ಮಾಯಿಲ್​ ತಮಟಗಾರ ಹೇಳಿದ್ದ ಆಡಿಯೋಗಳು ವೈರಲ್​ ಆಗಿದ್ದವು. ಇದಾದ ಬಳಿಕ ಇಸ್ಮಾಯಿಲ್​ ನಾಪತ್ತೆಯಾಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿದ್ದ ಉಪನಗರ ಠಾಣೆ ಪೊಲೀಸರು 8 ಜನರನ್ನು ಬಂಧಿಸಿದ್ದಾರೆ. ಆದರೆ, ಪೊಲೀಸರಿಗೆ ಇಸ್ಮಾಯಿಲ್​ ಪತ್ತೆ ಈವರೆಗೆ ಸಾಧ್ಯವಾಗಿಲ್ಲ. ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ಇಸ್ಮಾಯಿಲ್​ ಜಾಮೀನು ಕೋರಿ ಹೈಕೋರ್ಟ್​ ಮೊರೆ ಹೋಗಿದ್ದರು. ಅಜಿರ್ಯ ವಿಚಾರಣೆ ನಡೆಸಿದ ನ್ಯಾಯಮೂತಿರ್ ಅನಂತ ರಾಮನಾಥ ಹೆಗಡೆ ಅವರಿದ್ದ ಪೀಠ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇದರಿಂದ ಇಸ್ಮಾಯಿಲ್​ ಸದ್ಯಕ್ಕೆ ಬಂಧನ ಭೀತಿಯಿಂದ ಮುಕ್ತರಾಗಿದ್ದಾರೆ. ಅವರ ಪರ ಹಿರಿಯ ವಕೀಲ ಕೆ.ಎಲ್​. ಪಾಟೀಲ ವಾದ ಮಂಡಿಸಿದ್ದಾರೆ.