hescom power ಹೆಸ್ಕಾಂ. 
ಧಾರವಾಡ

hescom power ಅಡ್ಡಾದಿಡ್ಡಿ ಕರೆಂಟ್ ತಗೋಬೇಡಿ

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕ ಗಣೇಶೋತ್ಸವಕ್ಕೆ ಹೆಸ್ಕಾಂ ಸುರಕ್ಷತಾ ಮಾರ್ಗಸೂಚಿ
  • ಅನುಮತಿ ಪಡೆಯಲು ಅಧಿಕಾರಿಗಳ ಮನವಿ
ಹುಬ್ಬಳ್ಳಿ: hescom power ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮಾರ್ಗಸೂಚಿ ಹೊರಡಿಸಿರುವ ಹೆಸ್ಕಾಂ, ಕೆಲವು ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಗೆ ಸೂಚನೆ ನೀಡಿದೆ.
ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನಧಿಕೃತವಾಗಿ ವಿದ್ಯುತ್​ ಲೈನ್​ಗಳಿಗೆ ಹುಕ್​ ಹಾಕಿ ಸಂಪರ್ಕ ಪಡೆಯಬಾರದು. ಸಂಬಂಧ ಪಟ್ಟ ಹೆಸ್ಕಾಂ ಉಪ ವಿಭಾಗೀಯ ಅಥವಾ ಶಾಖಾ ಕಚೇರಿಗೆ ತೆರಳಿ ಅನುಮತಿ ಪಡೆದು, ನಿಯಮಾನುಸಾರ ಸುರಕ್ಷತೆಯಿಂದ ಸಂಪರ್ಕ ಪಡೆಯಬೇಕು. ಗಣಪತಿ ಪ್ರತಿಷ್ಠಾಪನೆ ಮಾಡುವ ಸ್ಥಳದ ಸುತ್ತಮುತ್ತ ಯಾವುದೇ ವಿದ್ಯುತ್​ ಮಾರ್ಗಗಳಿಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ವಿದ್ಯುತ್​ಲೈನ್​ ಕೆಳಗೆ ಅಥವಾ ಅಕ್ಕಪಕ್ಕದಲ್ಲಿ ಗಣಪತಿ ಪೆಂಡಾಲ್​, ಮಂಟಪಗಳನ್ನು ಹಾಕಬಾರದು. ಸುರಕ್ಷತೆಯ ಅಂತರವನ್ನು ಕಾಯ್ದುಕೊಂಡು ಪೆಂಡಾಲ್​, ಮಂಟಪಗಳನ್ನು ನಿರ್ಮಾಣ ಮಾಡಬೇಕು.
ವಿದ್ಯುತ್​ ಕಂಬಗಳು, ಟ್ರಾನ್ಸ್​ಫಾರ್ಮರ್​(ಟಿಸಿ)ಗಳಿಗೆ ಬ್ಯಾನರ್​, ಪೋಸ್ಟರ್​ ಮತ್ತು ಫಲಕಗಳನ್ನು ಕಟ್ಟಬಾರದು. ಗಣೇಶನ ವಿಗ್ರಹ ವಿಸರ್ಜನೆ ದಿನ ವಿದ್ಯುತ್​ ತಂತಿಗಳಿಗೆ ತಾಗುವ ರೀತಿಯಲ್ಲಿ ಅತೀ ಎತ್ತರದ ಧ್ವಜ, ಕಟೌಟ್​ಗಳನ್ನು ಕಟ್ಟಬಾರದು. ಗಣಪತಿ ವಿಸರ್ಜನಾ ಮೆರವಣಿಗೆ ನಡೆಯುವ ಬೀದಿಗಳಲ್ಲಿ ವಿದ್ಯುತ್​ ಲೈನ್​ಗಳ ಅಡಚಣೆ ಇದ್ದಲ್ಲಿ ಸಂಬಂಧಿಸಿದ ಹೆಸ್ಕಾಂ ಕಚೇರಿಯ ಗಮನಕ್ಕೆ ತರಬೇಕು.
ಅಂತಹ ವಿದ್ಯುತ್​ ಮಾರ್ಗಗಳಲ್ಲಿ ವಿದ್ಯುತ್​ ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಗಣೇಶ ವಿಸರ್ಜನೆಗೆ ಅನುಕೂಲ ಮಾಡಿಕೊಡಲು ಹೆಸ್ಕಾಂ ಸದಾ ಸನ್ನದ್ದವಾಗಿರುತ್ತದೆ.
ಒಂದು ವೇಳೆ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಹೋದರೆ ಏನಾದರೂ ಅವಘಡಗಳು ಸಂಭವಿಸಿದರೆ ಅದಕ್ಕೆ ಹೆಸ್ಕಾಂ ಜವಾಬ್ದಾರಿಯಲ್ಲ. ಹೀಗಾಗಿ ಎಲ್ಲ ಗಣೇಶ ಮಂಡಳಿಗಳು ಸೂಕ್ತ ಸುರಕ್ಷತಾ ಕ್ರಮ ಅನುಸರಿಸಿ ಗಣೇಶ ಹಬ್ಬ ಆಚರಿಸಬೇಕೆಂದು ಹೆಸ್ಕಾಂ ಹುಬ್ಬಳ್ಳಿ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ್​ ಕೋರಿದ್ದಾರೆ.