Hemaraddi mallamma ಹುಬ್ಬಳ್ಳಿಯ ತಾಲೂಕು ಆಡಳಿತ ಸೌಧದಲ್ಲಿ ಭಾನುವಾರ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಆಚರಿಸಲಾಯಿತು. ಶಾಸಕರಾದ ಎನ್.ಎಚ್. ಕೋನರಡ್ಡಿ, ಎಫ್.ಎಚ್. ಜಕ್ಕಪ್ಪನವರ, ತಾಪಂ ಇಒ ಡಾ. ರಾಮಚಂದ್ರ ಹೊಸಮನಿ, ತಹಸೀಲ್ದಾರ್ ಸಿ.ಎಸ್. ಕುಲಕರ್ಣಿ ಇತರರು ಇದ್ದರು.
- ಹುಬ್ಬಳ್ಳಿ ತಾಲೂಕಾಡಳಿತದಿಂದ ಶಿವಶರಣೆ ಮಲ್ಲಮ್ಮ ಜಯಂತ್ಯುತ್ಸವ ಆಚರಣೆ
- ಶಾಸಕರು ಸಮಾಜದ ಗಣ್ಯರು ಭಾಗಿ
ಹುಬ್ಬಳ್ಳಿ: Hemaraddi mallamma ಇಲ್ಲಿಯ ತಾಲೂಕು ಆಡಳಿತ ಸೌಧದ ತಹಸೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕು ಆಡಳಿತದ ವತಿಯಿಂದ ಭಾನುವಾರ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಜಯಂತ್ಯುತ್ಸವ ಆಚರಿಸಲಾಯಿತು.
ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ನಾಯಕರು ಗೌರವ ಸಲ್ಲಿಸಿದರು.
ಶಾಸಕರಾದ ಎನ್.ಎಚ್. ಕೋನರೆಡ್ಡಿ, ಮಹೇಶ ಟೆಂಗಿನಕಾಯಿ, ಎಫ್.ಎಚ್. ಜಕ್ಕಪ್ಪನವರ ಅವರು ಮಾತನಾಡಿ, ಮಲ್ಲಮ್ಮಳ ಭಕ್ತಿಯನ್ನು ಕೊಂಡಾಡಿದರು. ಅವಳ ಆದರ್ಶ ಗುಣಗಳು ಇತರರಿಗೆ ಮಾದರಿಯಾಗಿವೆ ಎಂದರು.
ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಮಚಂದ್ರ ಹೊಸಮನಿ, ಗ್ರೇಡ್ 2 ತಹಸೀಲ್ದಾರ್ ಸಿ.ಎಸ್. ಕುಲಕರ್ಣಿ, ನೀಲಮ್ಮ ತಾಯಿ ಅಸುಂಡಿ, ಉಮೇಶ ಪಾಟೀಲ, ಕೆ.ಬಿ. ಲಕ್ಕಣ್ಣನವರ, ಆರ್.ಕೆ. ಪಾಟೀಲ್, ಜೆ.ಎಚ್. ಈರೆಡ್ಡಿ, ಸತೀಶ್ ಮಾಡಳ್ಳಿ, ನಾರಾಯಣ ಈರಡ್ಡಿ, ಉದಯ ಹೊಸಮನಿ, ರಘುನಾಥ ಕೆಂಪಲಿಂಗನಗೌಡ, ವೆಂಕನಗೌಡ ಪಾಟೀಲ, ಬಸವರಾಜ ಹೊಂಬಳ, ರಾಜೇಂದ್ರ ರೆಡ್ಡಿ, ಮಂಜುನಾಥ ಕಿರೆಸೂರ, ವಿವೇಕ ಪಾಟೀಲ, ಅಶೋಕ ಇಟಗಿ, ವಾಸು ಕೋನರೆಡ್ಡಿ, ತಾಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
ಸಮಾಜದ ಪ್ರಮುಖರನ್ನು ಗೌರವಿಸಲಾಯಿತು.