heart attack ಚಾಲಕನ ಸಮಯಪ್ರಜ್ಞೆ
ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಕಲಬುರ್ಗಿಯಿಂದ ಹುಬ್ಬಳ್ಳಿಗೆ ಬರುತ್ತಿದ್ದ ಶಿಕ್ಷಕರೊಬ್ಬರಿಗೆ ಸೋಮವಾರ ಬೆಳಗಿನ ಜಾವ heart attack ಹೃದಯಾಘಾತವಾಗಿದ್ದು, ಚಾಲಕನ ಸಮಯಪ್ರಜ್ಞೆ ವಿಫಲವಾಗಿದೆ.
ಧಾರವಾಡದ ಶಿಕ್ಷಕ ಸತೀಶ ಮೊರಬ (50) ಮೃತರು. ಸತೀಶ ಅವರು ಬಸ್‌ನಲ್ಲಿ ಹೃದಯಾಘಾತದಿಂದ ಬಳಲುತ್ತಿದ್ದ ವೇಳೆ ಚಾಲಕ ಎ.ಎ. ನವಲಗುಂದ, ನಿರ್ವಾಹಕ ಎಂ.ಎಚ್. ರಿತ್ತಿ ಅವರು ಬಸ್ ಅನ್ನು ನೇರವಾಗಿ ಕೆಎಂಸಿಆರ್‌ಐಗೆ ತೆಗೆದುಕೊಂಡು ಬಂದಿದ್ದರು. ಆದರೆ, ಶಿಕ್ಷಕ ಸತೀಶ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಘಟನೆ ಕುರಿತು ಪೊಲೀಸರು ಹಾಗೂ ಸಾರಿಗೆ ಸಂಸ್ಥೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.