health camp ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿ ಮಠದಲ್ಲಿ ಭಾನುವಾರ ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟನೆಯಲ್ಲಿ ಡಿ.ಆರ್​. ಪಾಟೀಲ, ಬಾಳು ಮಗಜಿಕೊಂಡಿ, ಗೀತಾ, ಡಾ. ಗೋವಿಂದ ಮಣ್ಣೂರ, ಬಸವರಾಜ ಕಲ್ಯಾಣಶೆಟ್ಟರ, ಇತರರು ಇದ್ದರು. 
ಧಾರವಾಡ

health camp ಮಠದಲ್ಲಿ ವೈದ್ಯಕೀಯ ಸೇವಾ ದಾಸೋಹ

ಪ್ರಮುಖ ಮುಖ್ಯಾಂಶಗಳು

  • ಸಿದ್ಧಾರೂಢ ಮಠದಲ್ಲಿ ಆರೋಗ್ಯ ಶಿಬಿರ
  • 900ಕ್ಕೂ ಹೆಚ್ಚು ಜನರ ತಪಾಸಣೆ
ಹುಬ್ಬಳ್ಳಿ: health camp ಇಲ್ಲಿಯ ಶ್ರೀ ಸಿದ್ಧಾರೂಢ ಮಠದ ಆವರಣದಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಭಾನುವಾರ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಯಿತು.
ಶ್ರೀಸಿದ್ಧಾರೂಢ ಸ್ವಾಮಿಯವರ ಟ್ರಸ್ಟ್​ ಕಮಿಟಿ ಹಾಗೂ ಕಿಮ್ಸ್​ ಹಾಸ್ಪಿಟಲ್​, ಬಾಲಾಜಿ ಹಾಸ್ಪಿಟಲ್​, ಬೆಂಗಳೂರಿನ ಶ್ರೀ ಸಾಯಿ ಮಂದಿರ ಟ್ರಸ್ಟ್​ ಕಮಿಟಿ, ತುಮಕೂರಿನ ಸದ್ಗುರು ಸೇವಾ ಸಂಘ ಹಾಗೂ ಗದಗನ ಕೆ.ಎಚ್​. ಪಾಟೀಲ ಮೆಡಿಕಲ್​ ಇನ್​ಸ್ಟಿಟ್ಯೂಟ್​ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಶಿಬಿರದಲ್ಲಿ ಹೆಚ್ಚಿನ ಜನರು ಪಾಲ್ಗೊಂಡು ತಪಾಸಣೆ ಮಾಡಿಸಿಕೊಂಡರು.
ಶ್ರೀಮಠದ ಭಕ್ತರ ಮೇಲ್ಮನೆ ಸಭಾದ ಅಧ್ಯಕ್ಷ ಡಿ.ಆರ್​. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀಮಠದಲ್ಲಿ ಅನ್ನದಾಸೋಹ, ಜ್ಞಾನದಾಸೋಹದ ಜೊತೆಗೆ ವೈದ್ಯಕೀಯ ಸೇವಾ ದಾಸೋಹ ನಡೆಸುತ್ತಿರುವುದು ತುಂಬಾ ಶ್ಲಾಘನೀಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಮಠದ ಟ್ರಸ್ಟ್​ ಕಮಿಟಿ ಚೇರ್ಮನ್​ ಬಾಳು ಮಗಜಿಕೊಂಡಿ ಮಾತನಾಡಿ, ವೈದ್ಯೋ ನಾರಾಯಣೋ ಹರಿ ಎಂಬ ಶ್ಲೋಕದಂತೆ ವೈದ್ಯರು ದೇವರ ಸಮಾನ. ವಿವಿಧ ಆಸ್ಪತ್ರೆಗಳ ವೈದ್ಯರು ಶ್ರೀಮಠಕ್ಕೆ ಬಂದು ಉಚಿತವಾಗಿ ತಪಾಸಣೆ ಹಾಗೂ ಚಿಕಿತ್ಸೆ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಡಾ. ರಘುನಾಥ ಸಿ.ಎನ್​., ಡಾ. ಮೋಹನ ರಾಮ, ಡಾ. ಕ್ರಾಂತಿಕಿರಣ, ಡಾ. ಶಿಲ್ಪಾ ಚಾಟ್ನಿ, ಡಾ. ಮಿಲಿಂದ ಶೆಟ್ಟಿ, ಡಾ.ಶಿಲ್ಪಾ ಮತ್ತು 20ಕ್ಕೂ ಹೆಚ್ಚು ವೈದ್ಯರನ್ನೊಳಗೊಂಡ ತಂಡ ಸುಮಾರು 920 ಜನರನ್ನು ತಪಾಸಣೆ ನಡೆಸಿ ವೈದ್ಯಕಿಯ ಸಲಹೆ ನೀಡಿದರು. ಅಗತ್ಯ ಇರುವವರಿಗೆ ಔಷಧ ವಿತರಣೆ ಮಾಡಲಾಯಿತು.