health camp ಹುಬ್ಬಳ್ಳಿಯ ಐಬಿಎಂಆರ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ ಏರ್ಪಡಿಸಲಾಯಿತು. ವಿನಯಚಂದ್ರ ಮಹೇಂದ್ರಕರ, ಎಸ್.ಆರ್. ಓಂಕಾರಿ, ಡಾ. ಇಗ್ನೇಶ ಸಕ್ರಿ, ಪ್ರೊ. ಅಣ್ಣಪ್ಪ ಕೊರವರ ಇತರರು ಇದ್ದರು.
- ಐಬಿಎಂಆರ್ ಕಾಲೇಜಿನಲ್ಲಿ ನೇತ್ರ ತಪಾಸಣೆ ಶಿಬಿರ
- ಮಾನಸಿಕ ಮತ್ತು ದೈಹಿಕ ಆರೋಗ್ಯದ ಮಹತ್ವದ್ದು
ಹುಬ್ಬಳ್ಳಿ: health camp ಇಲ್ಲಿಯ ವಿದ್ಯಾನಗರ ಐಬಿಎಂಆರ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕ ಹಾಗೂ ಲಯನ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಬುಧವಾರ ಉಚಿತ ಕಣ್ಣಿನ ತಪಾಸಣೆ ಶಿಬಿರ ಹಾಗೂ ವೈದ್ಯರ ದಿನ ಆಚರಿಸಲಾಯಿತು.
ಐಬಿಎಂಆರ್ ಸಮೂಹ ಸಂಸ್ಥೆಗಳ ಸಿಇಒ ಡಾ. ಇಗ್ನೇಶ ಸಕ್ರಿ ಮಾತನಾಡಿ, ಸಮಾಜದ ಆರೋಗ್ಯ ಕಾಪಾಡುವಲ್ಲಿ ವೈದ್ಯರ ಪಾತ್ರ ಮಹತ್ವದ್ದಾಗಿದೆ. ಇಂತಹ ಶಿಬಿರಗಳು, ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಸಮಾಜಕ್ಕೆ ಉಪಯುಕ್ತವಾಗಿವೆ ಎಂದು ತಿಳಿಸಿದರು.
ಖ್ಯಾತ ಮನೋವೈದ್ಯ ಡಾ. ಗಿರೀಶಬಾಬು ಅವರು, ಮಾನಸಿಕ ಮತ್ತು ದೈಹಿಕ ಆರೋಗ್ಯದ ಮಹತ್ವ ಕುರಿತು ಉಪಯುಕ್ತ ಮಾಹಿತಿ ನೀಡಿದರು.
ಐಬಿಎಂಆರ್ ಸಮೂಹ ಸಂಸ್ಥೆಗಳ ಅಧ್ಯಕ್ಷ ವಿನಯಚಂದ್ರ ಮಹೇಂದ್ರಕರ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಆರ್. ಓಂಕಾರಿ ಅತಿಥಿಯಾಗಿದ್ದರು.
ಹಿರಿಯ ವೈದ್ಯರನ್ನು ಸನ್ಮಾನಿಸಲಾಯಿತು. ಮಹಾವಿದ್ಯಾಲಯದ ಉಪನ್ಯಾಸಕರು, ಸಿಬ್ಬಂದಿಗೆ ಉಚಿತ ಕಣ್ಣಿನ ತಪಾಸಣೆ ನಡೆಸಲಾಯಿತು.
ಮಹಾವಿದ್ಯಾಲಯದ ಪ್ರಾಚಾರ್ಯ ಸಮೀರ್ ಗುಡಿ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಪ್ರೊ. ಅಣ್ಣಪ್ಪ ಕೊರವರ ಹಾಗೂ ಬಿಕಾಂ ವಿಭಾಗದ ಮುಖ್ಯಸ್ಥ ರವಿ ಕಬ್ಬಿಣದ, ಜಮುನಾ, ಸ್ಮಿತಾ, ಸಮರ್ಥ ಬಡಿಗೇರ ಇತರರು ಉಪಸ್ಥಿತರಿದ್ದರು. ಎನ್ಎಸ್ಎಸ್ ಸ್ವಯಂಸೇವಕರು ಕಾರ್ಯಕ್ರಮದ ವ್ಯವಸ್ಥೆ ಮಾಡಿ ಯಶಸ್ವಿಗೊಳಿಸಿದರು.